
ಪರಿಚಯ
ಪಠ್ಯ ಪುಸ್ತಕಗಳು ಅಥವಾ ನಾವು ಓದುವ ಪ್ರತಿಯೊಂದು ಪುಸ್ತಕ ಆಗಿರಬಹುದು ಕೇವಲ ಕಾಗದದ ತುಣುಕುಗಳಲ್ಲ, ಅವು ಬದುಕನ್ನು ಬದಲಾಯಿಸುವ ಒಂದು ಶಕ್ತಿಯನ್ನೊಳಗೊಂಡಿವೆ. ಒಬ್ಬ ವ್ಯಕ್ತಿ ಅನುಭವಿಸಲು ಸಾಧ್ಯವಿಲ್ಲದ ಅನೇಕ ಜೀವನ ಪಾಠಗಳನ್ನು ಪುಸ್ತಕಗಳ ಮೂಲಕ ಕಲಿಯಬಹುದು ಅಂದ್ರೆ ಒಬ್ಬ ವ್ಯಕ್ತಿ ಒಂದು 60 ವರ್ಷಗಳ ತನಕ ಅವನ ಒಂದು ಅನುಭವಗಳನ್ನು ಕೇವಲ ಒಂದು ಪುಸ್ತಕದ ಮುಖಾಂತರ ಹೊರಗೆ ತೆಗೆದುಕೊಂಡು ಬರುತ್ತಾನೆ. ನಾವು 60 ವರ್ಷಗಳಲ್ಲಿ ಏನೇನು ಮಾಡಿದ್ದಾನೆ ಅನ್ನೋದು ನಾವು ಕೇವಲ ಒಂದು ಪುಸ್ತಕದಿಂದ ನಾವು ಕಲಿತುಕೊಳ್ಳಬಹುದು. ಕೆಲ ಪುಸ್ತಕಗಳು ನಮ್ಮ ಚಿಂತನೆ, ಅಭ್ಯಾಸಗಳು, ನಂಬಿಕೆಗಳು ಮತ್ತು ಬದುಕಿನ ದಾರಿಯನ್ನು ಸಂಪೂರ್ಣವಾಗಿ ಬದಲಿಸುತ್ತವೆ. ಇಲ್ಲಿ ಅಂತಹ ಜೀವನವನ್ನು ಬದಲಾಯಿಸುವ Top 5 ಪುಸ್ತಕಗಳನ್ನು ಪರಿಚಯಿಸುತ್ತಿದ್ದೇವೆ. ನೀವು ಇದನ್ನು ಪ್ರತಿ ಒಬ್ಬರು ಕೂಡ ಓದುವುದಕ್ಕೆ ಪ್ರಯತ್ನ ಮಾಡಿ ನಿಮ್ಮ ಜೀವನ ಖಂಡಿತವಾಗಿಯೂ ಬದಲಾವಣೆ ಆಗುತ್ತದೆ ಎಂಬುದು ನನ್ನ ಒಂದು ಬಲವಾದ ಅಂತಹ ನಂಬಿಕೆ.
1.The Power of Now – Eckhart Tolle

ಈ ಪುಸ್ತಕವು ನಮಗೆಲ್ಲರಿಗೂ “ಪ್ರಸ್ತುತ ಕ್ಷಣದಲ್ಲಿ ಬದುಕುವುದು” ಎಷ್ಟು ಮುಖ್ಯ ಎಂಬುದನ್ನು ಕಲಿಸುತ್ತದೆ.
ಮೂಲ ಪಾಠ: ನಾವು ಭೂತಕಾಲದ ಮಾಡಿದ ತಪ್ಪುಗಳು ಆಗಿರಬಹುದು ಅಥವಾ ಸರಿ ಯಾದ ಕೆಲಸಗಳು ಆಗಿರಬಹುದು ನಮಗೆ ಇಂದಿನ ದಿನಗಳು ತುಂಬಾ ಕಷ್ಟಕರವಾಗಿರುತ್ತದೆ ತುಂಬಾ ತಪ್ಪುಗಳನ್ನು ಕೂಡ ಮಾಡಿರುತ್ತೇವೆ. ಅಥವಾ ಭವಿಷ್ಯದ ಭಯದಲ್ಲಿ ಹೆಚ್ಚು ಕಾಲ ಕಳೆಯುತ್ತೇವೆ. ನಮ್ಮ ಭವಿಷ್ಯ ಯಾವ ರೀತಿಯಲ್ಲಿ ಇರುತ್ತದೆ ಎಂದು ತುಂಬಾ ಯೋಚಿಸುತ್ತೇರುತ್ತೇವೆ. ಆದರೆ ನಿಜವಾದ ಶಕ್ತಿ ‘ಈಗ’ ಇರುವುದರಲ್ಲಿ ಇದೆ. ಈ ಪುಸ್ತಕ ಓದುವುದರಿಂದ ನಮಗೆ ಹೇಗೆ ಯೋಚಿಸಬೇಕು ಎಂಬುದು ನಮಗೆ ಗೊತ್ತಾಗುತ್ತದೆ .
- ಯಾಕೆ ಓದಬೇಕು?: ಮನಸ್ಸಿನ ಶಾಂತಿ, ಒತ್ತಡ ಕಡಿಮೆಯಾಗುತ್ತದೆ ಮತ್ತು ನಮ್ಮ ಒಂದು ಸಮಯಕ್ಕೆ ಸರಿಯಾದ ಸವಾಲುಗಳನ್ನು ಹೇಗೆ ಹೆದರಿಸಬೇಕು. ಎಂಬುದು ಗೊತ್ತಾಗುತ್ತದೆ. ನಮ್ಮ ಒಂದು ಆತ್ಮ ಸಾಕ್ಷರತೆಗೆ ಅಂದ್ರೆ ನಮ್ಮ ಭವಿಷ್ಯಕ್ಕೆ ಒಂದು ದಾರಿ ಈ ಬುಕ್ಕು ಪುಸ್ತಕ ಒದಗಿಸುತ್ತದೆ.
- ಜೀವನ ಬದಲಾವಣೆ: ಜೀವನದ ಒಂದು ಅರ್ಥವನ್ನು ಈ ಪುಸ್ತಕ ನೀಡುತ್ತದೆ. ಪ್ರತಿ ಕ್ಷಣವನ್ನು ಪ್ರತಿ ನಿಮಿಷವನ್ನು ಹೇಗೆ ಆನಂದಿಸಬೇಕು ಎಂಬುದನ್ನು ಈ ಪುಸ್ತಕ ನಮಗೆ ಹೇಳಿಕೊಡುತ್ತದೆ.
2.Atomic Habits – James Clear
ಸಣ್ಣ ಸಣ್ಣ ಅಭ್ಯಾಸಗಳು ದೊಡ್ಡ ಬದಲಾವಣೆಗಳನ್ನು ತರುತ್ತವೆ ಎಂದು ಈ ಪುಸ್ತಕ ವಿವರಿಸುತ್ತದೆ. ನನಗೆ ತುಂಬಾ ಇಷ್ಟವಾದ ಪುಸ್ತಕ ಕೂಡ ಇದು ನನ್ನ ಜೀವನ ಬದಲಾಗಿದ್ದು ಕೂಡ ಇದೇ ಪುಸ್ತಕದಿಂದ ಎಂದು ಕೂಡ ಹೇಳಬಹುದು.
ಮೂಲ ಪಾಠ: 1% ದಿನನಿತ್ಯದ ಸುಧಾರಣೆ, ದೀರ್ಘಕಾಲದಲ್ಲಿ 100% ಬದಲಾವಣೆ ತರುತ್ತದೆ
ಉದಾಹರಣೆಗೆ ನೀವು ಪ್ರತಿದಿನ ಒಂದು ಐದು ಪೇಜ್ ಓದುವುದರಿಂದ ಪ್ರತಿ ತಿಂಗಳಿಗೆ ಒಂದು ಪುಸ್ತಕವನ್ನು ಮುಗಿಸುತ್ತೀರಿ ಅದೇ ರೀತಿ ಒಂದು ತಿಂಗಳಿಗೆ ನೀವು ಸುಮಾರು 12 ಪುಸ್ತಕಗಳನ್ನು ಓದಿರುತ್ತೀರಿ.
ನೀವು ಪ್ರಾರಂಭ ಮಾಡಿದ್ದು ಕೇವಲ ಪ್ರತಿದಿನ 5 ಪೇಜ್ ಗಳು ಓದಬೇಕು ಎಂದು ಕೊಂಡಿದ್ದೀರಿ ಆದರೆ ಒಂದು ವರ್ಷ ಆದ ನಂತರ ನೀವು ನೋಡಿದರೆ ನೀವು 12 ಪುಸ್ತಕಗಳನ್ನು ಓದಿರುತ್ತೀರಿ ಇದೆ ಈ ಒಂದು ಪುಸ್ತಕದ ಒಂದು ಮಹತ್ವ
3.Think and Grow Rich – Napoleon Hill
ವಿಶ್ವದ ಅತ್ಯಂತ ಪ್ರಸಿದ್ಧ Self-Help ಪುಸ್ತಕಗಳಲ್ಲಿ ಒಂದು
ಮೂಲ ಪಾಠ:ಯಶಸ್ಸು ಕೇವಲ ಹಣವಲ್ಲ, ಅದು ಮನಸ್ಸಿನ ಚಿಂತನೆ ಮತ್ತು ನಂಬಿಕೆಯಿಂದ ಆರಂಭವಾಗುತ್ತದೆ. ನಾವು ಯಶಸ್ಸು ಆಗಬೇಕು ಅಂತಂದರೆ ನಮ್ಮ ಮೆದುಳು ಹೇಗೆ ಕೆಲಸ ಮಾಡಬೇಕು ಎಂಬುದು ಕೂಡ ಅಷ್ಟೇ ಇಂಪಾರ್ಟೆಂಟ್ ಆಗುತ್ತೆ ಎಂಬುದನ್ನು ತುಂಬಾ ಅದ್ಭುತವಾಗಿ ಹಣವನ್ನು ಹೇಗೆ ಸಂಪಾದನೆ ಮಾಡಬೇಕು ಎಂಬುದನ್ನು ಕೂಡ ತುಂಬಾ ತುಂಬಾ ಚೆನ್ನಾಗಿ ಬರೆದಿದ್ದಾರೆ.
ಯಾಕೆ ಓದಬೇಕು?Goal setting, Visualization, ಮತ್ತು Positive Thinking ಮಹತ್ವ ತಿಳಿಸುತ್ತದೆ. ನಾವು ಗುರಿಯನ್ನು ಹೇಗೆ ಇಟ್ಟುಕೊಳ್ಳಬೇಕು. ಇಟ್ಟಿರುವಂತಹ ಗುರಿಯನ್ನು ಹೇಗೆ ಮುಂದೆ ಅಂದರೆ ಒಂದು ಗುರಿ ಇಟ್ಟುಕೊಂಡಿದ ನಂತರ ಮುಂದೆ ಆಗುವಂತ ಸಮಸ್ಯೆಗಳು ಏನು ಅನುಕೂಲಗಳು ಏನು ಅನಾನುಕೂಲಗಳು ಏನು ಎಂಬುದನ್ನು ಹೀಗೆ ಆಲೋಚನೆ ಮಾಡುವುದು. ಪ್ರಪಂಚ ಹೇಗೆ ಮುಂದುವರಿಯುತ್ತಿದೆ ಎಂಬುದನ್ನು ಹೀಗೆ ನಾವು ತಿಳಿದುಕೊಳ್ಳುವುದಕ್ಕೆ ನಾವು ಈ ಪುಸ್ತಕವನ್ನು ಓದಬೇಕು. ಮತ್ತು ನಾವು ಯಾವಾಗಲೂ ಕೂಡ ಒಂದು ಸಕರಾತ್ಮಕವಾಗಿ ಆಲೋಚನೆ ಮಾಡುವಂತಹ ಆಗಿರಬೇಕು ನೆಗೆಟಿವ್ ಆಗಿ ಮಾತನಾಡುವವರು ತುಂಬಾ ಜನ ಇದ್ದಾರೆ ಅದರಿಂದ ನಮಗೆ ನಮ್ಮ ಸುತ್ತಮುತ್ತ ನಲ್ಲಿ ತುಂಬಾ ಜನರು ನಮಗೆ ನೆಗೆಟಿವ್ ಆಗಿ ಮಾತಾಡುವವರು ಇರ್ತಾರೆ ಅದರಿಂದ ಪಾಸಿಟಿವ್ ಆಗಿ ಮಾತನಾಡುವವರು ತುಂಬಾ ಕಡಿಮೆ ಇರ್ತಾರೆ ನಾವು ಪುಸ್ತಕಗಳನ್ನು ಓದುವುದರಿಂದ ಪಾಸಿಟಿವ್ ವೈಬ್ರೇಶನ್ ಅನ್ನೋದು ಬರುತ್ತೆ.
4.The 7 Habits of Highly Effective People – Stephen R. Covey
ಜೀವನವನ್ನು ಸರಳವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸಲು ಮಾರ್ಗದರ್ಶಕ ಪುಸ್ತಕ. ನಮ್ಮ ಜೀವನದಲ್ಲಿ ಕೆಲವೊಂದು ಅಭ್ಯಾಸಗಳು ರೂಡಿಸಿಕೊಂಡರೆ ನಮ್ಮ ಜೀವನವೇ ಬದಲಾವಣೆ ಆಗುತ್ತದೆ ಎಂಬುದು ಕೆಲಬರು ಹೇಳುತ್ತಾರೆ ಅದೇ ರೀತಿಯಲ್ಲಿ. ಒಬ್ಬ ವ್ಯಕ್ತಿ ಎಲ್ಲರೂ ಕೂಡ ಹೇಗೆ ಸಕ್ಸಸ್ ಆಗ್ತಾರೆ ಪ್ರತಿ ಸಕ್ಸಸ್ಫುಲ್ ವ್ಯಕ್ತಿಯಲ್ಲಿ ಅಂತದ್ದು ಒಂದು ಅಭ್ಯಾಸ ಅನ್ನೋದು ಇರುತ್ತೆ ಅಲ್ವಾ ಆ ಅಭ್ಯಾಸ ಯಾವುದು? ಹೇಗೆ ಕೆಲಸ ಮಾಡುತ್ತೆ ಅವರು ಹೇಗೆ ಸಕ್ಸಸ್ ಆದರೂ ಎಂಬುದನ್ನು. ಈ ಪುಸ್ತಕದಲ್ಲಿ ಬರೆಯಲಾಗಿದೆ ಅಂದ್ರೆ ಏಳು ಅಭ್ಯಾಸಗಳು ಇದಾವೆ, ಆ ಏಳು ಅಭ್ಯಾಸಗಳನ್ನು ನೀವು ರೂಡಿಸಿಕೊಂಡರೆ ನಿಮ್ಮ ಜೀವನವೇ ಬದಲಾವಣೆಯಾಗುತ್ತದೆ ಅಂದರೆ ನೀವು ನಂಬುತ್ತೀರಾ ನಂಬಲೇಬೇಕು ಈ 7 ಅಭ್ಯಾಸಗಳಿಂದ ನಮ್ಮ ಜೀವನವೇ ಬದಲಾವಣೆ ಆಗುತ್ತದೆ ಆಭ್ಯಾಸಗಳು ಏನೇನು ಇದಾವೆ ಅನ್ನೋದು ಪುಸ್ತಕ ಓದಿ ತಿಳಿದುಕೊಳ್ಳಿ ಅಥವಾ ಯೂಟ್ಯೂಬ್ ನಲ್ಲಿ ನೋಡಿ ತಿಳಿದುಕೊಳ್ಳಬಹುದು ನೀವು.
ಮೂಲ ಪಾಠ:ಯಶಸ್ವಿ ವ್ಯಕ್ತಿಗಳಿಗೆ ಇರುವ 7 ಮುಖ್ಯ ಹವ್ಯಾಸಗಳನ್ನು ಇಲ್ಲಿ ವಿವರಿಸಲಾಗಿದೆ.
ಉದಾಹರಣೆಗೆ – “Be Proactive”, “Begin with the End in Mind”, “Sharpen the Saw”.
ಯಾಕೆ ಓದಬೇಕು? ಲೀಡರ್ ಶಿಪ್ ಕ್ವಾಲಿಟೀಸ್ ನಮ್ಮಲ್ಲಿ ಓದುವುದರಿಂದ ಬರುತ್ತದೆ. ಪ್ರತಿಯೊಬ್ಬ ವ್ಯಕ್ತಿ ಕೂಡ ಈ ಪುಸ್ತಕವನ್ನು ಓದಲೇಬೇಕು ಅಭ್ಯಾಸಗಳನ್ನು ಹೇಗೆ ರೂಡಿಸಿಕೊಳ್ಳಬೇಕು. ಮೋಸ್ಟ್ ಸಕ್ಸೆಸ್ ಸ್ಟೋರಿ ಈ ಪುಸ್ತಕದಲ್ಲಿ ಸಿಗುತ್ತವೆ. ನಮ್ಮ ಜೀವನ ಹೇಗೆ ಬೆಳವಣಿಗೆ ಆಗುತ್ತದೆ ಪ್ರತಿಯೊಬ್ಬ ವ್ಯಕ್ತಿ ಕೂಡ ಯಾವ ರೀತಿಯಲ್ಲಿ ಆಲೋಚನೆಯನ್ನು ಮಾಡಬೇಕು ಎಂತೆಂಥ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.
5.Wings of Fire – A.P.J. Abdul Kalam
ಭಾರತದ missile man Apj ಅಬ್ದುಲ್ ಕಲಾಮ್ ಅವರ ಆತ್ಮಕತೆ. ಎಪಿಜೆ ಅಬ್ದುಲ್ ಕಲಾಂ ಅವರ ಒಂದು ಅದ್ಭುತವಾದಂತಹ ಒಂದು ತಮ್ಮ ಜೀವನದ ಒಂದು ಆತ್ಮಕಥೆ ಇದು ಅವರು ಒಂದು ಮೂಲತಹ ಒಂದು ತಮಿಳ ನಾಡಿನಲ್ಲಿ ಜನಿಸಿ ತುಂಬಾ ಬಡತನದಲ್ಲಿ. ಬಡತನದಲ್ಲಿ ಜನಿಸಿ ಬಡ ಕುಟುಂಬದಲ್ಲಿ ಜೀವನವನ್ನು ಸಾಗಿಸಿ ಒಂದು ಸಣ್ಣದಾದಂತಹ ಮನೆಯಲ್ಲಿ ಇದ್ದು ಒಬ್ಬ ವ್ಯಕ್ತಿ ಅಂದುಕೊಂಡರೆ ರಾಷ್ಟ್ರಪತಿತನ ಕೂಡ ಹೋಗಬಹುದು ಎಂದು ಹೇಳಿಕೊಟ್ಟಂತ ವ್ಯಕ್ತಿ ಎಪಿಜೆ ಅಬ್ದುಲ್ ಕಲಾಂ ಅವರು ಅವರ ಒಂದು ಜೀವನ ಎಲ್ಲರಿಗೂ ಕೂಡ ಒಂದು ಮಾದರಿಯಾಗಿ ನಿಂತಿದೆ.
ಮೂಲ ಪಾಠ: ಬಡತನದಿಂದ ಹಿಡಿದು ರಾಷ್ಟ್ರಪತಿ ಯಾಗುವವರೆಗಿನ ಅವರ ಹೋರಾಟ, ಶ್ರಮ ಮತ್ತು ಕನಸು.
FULL Project Link 👇👇👇👇

