
Soundarya Dalli gambhira song kannada Reel 21
ಬೋಧನಾ ಸೂತ್ರಗಳು
ಬೋಧನ ಕಾರ್ಯದಲ್ಲಿ ಶಿಕ್ಷಕರು ಗಮನದಲ್ಲಿಡಬೇಕಾದ ಕೆಲವೊಂದು ನಿಯಮಗಳು ಇರುತ್ತದೆ ಯಾವುದೇ ಒಂದು ವಿಷಯವನ್ನು ನಾವು ಬೋಧನೆಯನ್ನು ಮಾಡಬೇಕು ಎಂದರೆ ಕೇವಲ ಅಭಿಷೇಕ ಸಂಬಂಧ ಪಟ್ಟಂತ ವಿಷಯಗಳು ಮಾತ್ರವಲ್ಲದೆ ಆ ವ್ಯಕ್ತಿಗೆ ಏನು ಬೇಕು ಏನು ಇಲ್ಲ ಎಂಬುದು ನಾವು ಮೊದಲೇ ತಿಳಿದುಕೊಂಡಿರಬೇಕು ನಮ್ಮ ಮುಂದೆ ಇರುವಂತಹ ವ್ಯಕ್ತಿ ಯಾರು ಅವರ ಜೊತೆ ಹೇಗೆ ನಾವು ಬೋಧನೆಯನ್ನು ಮಾಡಬೇಕು ನಾವು ಶಿಕ್ಷಕರಾದರೆ ಅವರ ನಮ್ಮ ಮುಂದೆ ಇರುವಂತ ವಿದ್ಯಾರ್ಥಿಗಳಿಗೆ ನಾವು ಬೋಧನೆ ಮಾಡುವಂತಹ ವಿಧಾನ ಹೇಗಿರಬೇಕು ವಿದ್ಯಾರ್ಥಿಗಳಲ್ಲಿಯೂ ಕೂಡ ವಿದ್ಯಾರ್ಥಿಯ ಒಂದು ಮೆದುಳಿನ ಶಕ್ತಿ ಹೇಗೆ ಇದೆ ಅವರು ಆಲೋಚನೆ ಮಾಡುವಂತಹ ಶಕ್ತಿ ಇದೇನಾ ಇಲ್ಲವಾ ಅಂತ ನಾವು ಮೊದಲೇ ತಿಳಿದುಕೊಳ್ಳಬೇಕು ಅಷ್ಟೇ ಅಲ್ಲ ನಾವು ಬೋಧನೆ ಮಾಡುವುದಕ್ಕೆ ಕೆಲವೊಂದು ಸೂತ್ರಗಳು ಅನ್ನೋದು ಇದಾವೆ ಆ ಸೂತ್ರಗಳನ್ನು ನಾವು ಅನುಸರಿಸಿದರೆ ನಮ್ಮ ಬೋಧನೆ ಇನ್ನೂ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ. ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಕಲಿಕಾರ್ಥಿಯನ್ನು ಕ್ರಿಯಾತ್ಮಕವಾಗಿ ಒಳಪಡಿಸಿಕೊಳ್ಳಲು ಮತ್ತು ಭಾಗವಹಿಸುವಂತೆ ಮಾಡಲು ಸಹಾಯಕವಾಗಿರುತ್ತದೆ ನಾವು ಹೇಳುವಂತಹ ಬೋಧನೆ ನಮ್ಮ ವಿದ್ಯಾರ್ಥಿಗಳು ಆ ಬೋಧನೆಯಲ್ಲಿ ತೊಡಗಿಸಿರಬೇಕು ಆ ಕಲಿಕೆಯಲ್ಲಿ ಒಳಪಡಿಸಿಕೊಳ್ಳಲು ಮತ್ತು ಅದರಲ್ಲಿ ಭಾಗವಾಗಿಸುವಂತೆ ನಾವು ಮಾಡಿರಬೇಕು. ಕಲಿಕೆಗೆ ಜೀವಂತಿಕೆಯನ್ನು ತುಂಬಿ ನಾವು ಏನನ್ನು ಕಳಿಸಬೇಕು ಎಂದು ಕೊಂಡಿದ್ದೇವೆ ಅದಕ್ಕೆ ನಾವು ಜೀವವಿದೆ ಎಂದು ನಾವು ವಿದ್ಯಾರ್ಥಿಗಳನ್ನು ನಾವು ಬಳಪಡಿಸಿಕೊಂಡು ಆ ಜೀವಂತಿಕೆಯನ್ನು ತುಂಬಿ ಕಲಿಕಾರ್ಥಿಗಳಿಗೆ ತುಂಬಾ ಆಸಕ್ತಿಯನ್ನು ಮತ್ತು ಪ್ರೇರಣೆಯನ್ನು ಉಂಟು ಮಾಡಿ ಕಲಿಕೆಯನ್ನು ಇನ್ನು ತುಂಬಾ ಪರಿಣಾಮಕಾರಿಯಾಗಿ ಮತ್ತು ಅರ್ಥಗರ್ಭಿತವಾಗಿ ಮಾಡುವುದರ ಜೊತೆಗೆ ಅಲ್ಲಿ ಕಾರ್ತಿಗಳ ದಾನವನ್ನು ಹೇಗೆ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಕೇಂದ್ರೀಕರಿಸಲು ಸಹಾಯವಾಗುತ್ತದೆ ಎಂಬುದನ್ನು ಕೂಡ ನಾವು ಮೊದಲೇ ನಿರ್ಧರಿಸಬೇಕು ಅಷ್ಟೇ ಅಲ್ಲ ಪಠ್ಯ ವಸ್ತು ಬೋಧನಾ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳಲು ಕಲಿಕೆಯ ಅನುಭವಗಳನ್ನು ರೂಪಿಸಲು ಮಾರ್ಗದರ್ಶನ ನೀಡುತ್ತವೆ. ನಾವೀಗ ಕೆಲವು ಪ್ರಮುಖ ಬೋಧನಾ ಸೂತ್ರಗಳನ್ನು ತಿಳಿಯೋಣ.
ಗೊತ್ತಿರುವುದರಿಂದ ಗೊತ್ತಿಲ್ಲದರ ಕಡೆಗೆ:
ಈ ಒಂದು ಸೂತ್ರದ ಪ್ರಕಾರ ನಮಗೆ ಬೋಧನಾ ಪ್ರಕ್ರಿಯೆಯು ವಿದ್ಯಾರ್ಥಿಗಳಿಗೆ ಗೊತ್ತಿರುವಂತಹ ವಿಚಾರಗಳಿಂದ ಪ್ರಾರಂಭವಾಗಿ ಗೊತ್ತಿರದೆ ಇರವಂತಹ ವಿಷಯಗಳೆಡೆಗೆ ಸಾಗಬೇಕೆಂದು ತಿಳಿಸುತ್ತದೆ ಅಂದರೆ ಇಲ್ಲಿ ಮುಖ್ಯವಾಗಿ ನಮಗೆ ಏನು ಗೊತ್ತಾಗುತ್ತದೆ ನಾವು ಒಂದು ಕ್ಲಾಸ್ ರೂಮಿಗೆ ಹೋಗಿದ್ದೇವೆ ತರಗತಿಗೆ ಹೋಗಿದ್ದೇವೆ ಎಂದುಕೊಂಡರೆ ಆ ವಿದ್ಯಾರ್ಥಿಗಳಿಗೆ ಮೊದಲು ಏನು ಗೊತ್ತಿದೆ ಅದನ್ನು ನಾವು ತಿಳಿದುಕೊಳ್ಳಬೇಕು ಇದನ್ನು ನಾವು ಪೂರ್ವಜ್ಞಾನ ಎಂದು ಕೂಡ ಕರೆಯುತ್ತೇವೆ. ಅಥವಾ ಆರಂಭವಾಗಿ ಗೊತ್ತಿರದೆ ಇರುವಂತಹ ವಿಷಯಗಳಿಗೆ ಸಾಗಬೇಕೆಂದು ಹೇಳಿದ್ದೇವೆ ಅಲ್ವಾ ಅದರಿಂದ ವಿದ್ಯಾರ್ಥಿಯ ಪೂರ್ವಜ್ಞಾನ ಅಥವಾ ಏನು ತಿಳಿದುಕೊಂಡಿರುವಂತ ವಿಷಯ ಏನಿದೆ ಅವನು ಏನನ್ನು ಅನುಭವಿಸಿದ್ದಾನೆ ಅನುಭವಗಳು ಏನೇನು ಇದಾವೆ ಅದನ್ನು ಆದರೆ ಮುಂದಿನ ಒಂದು ವಿಷಯವನ್ನು ನಾವು ಕಳಿಸಬೇಕು ಅವಾಗ ವಿಷಯವನ್ನು ತುಂಬಾ ಅರ್ಥಗರ್ಭಿತವಾಗಿ ಅರ್ಥಮಾಡಿಕೊಳ್ಳಲು ಆ ವಿದ್ಯಾರ್ಥಿಗೆ ಅನುಕೂಲವಾಗುತ್ತದೆ.
ಶಿಕ್ಷಕನು ಕೆಲವು ಪ್ರಶ್ನೆಗಳನ್ನು ಕೇಳುವುದರ ಮುಖಾಂತರ ವಿದ್ಯಾರ್ಥಿಗಳಿಗೆ ಗೊತ್ತಿರುವುದನ್ನು ತಿಳಿದುಕೊಳ್ಳಬಹುದು. ಒಂದು ವಿಷಯವನ್ನು ಹೇಳುವುದಕ್ಕೆ ಹೋಗಿದ್ದಾನೆ ಎಂದರೆ ಆ ವಿಷಯದ ಬಗ್ಗೆ ಕೆಲವೊದು ಪ್ರಶ್ನೆಗಳನ್ನು ಮೊದಲು ಕೇಳಬೇಕು ಆ ವಿದ್ಯಾರ್ಥಿಗಳಿಗೆ ಎಷ್ಟು ಗೊತ್ತಿದೆ ಎಂಬುದು ಶಿಕ್ಷಕನಿಗೆ ಗೊತ್ತಾಗುತ್ತದೆ ಮತ್ತು ಹೇಗೆ ಹೇಳಬೇಕು ಮತ್ತು ಯಾವ ತರ ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂಬುದು ಎಷ್ಟರಮಟ್ಟಿಗೆ ತಿಳಿಸಬೇಕೆಂಬುದು ಕೂಡ ಗೊತ್ತಾಗುತ್ತದೆ.
ಉದಾಹರಣೆಗೆ ದೇಶದ ಐಕ್ಯತೆಯ ಮಹತ್ವವನ್ನು ಬೋಧಿಸುವುದಕ್ಕೆ ಮೊದಲು ತಮ್ಮ ಮನೆಯ ಐಕ್ಯತೆಯ ಮಹತ್ವವನ್ನು ತಿಳಿಸಬೇಕಾಗುತ್ತದೆ ಅವಾಗ ಭೋದಿಸಿದರೆ ಈಗಾಗಲೇ ಕಲಿತಿರುವುದಕ್ಕೂ ಹಾಗೂ ಹೊಸದಾಗಿ ಕಲಿಯಬೇಕಾಗಿರುವುದನ್ನು ಸ್ಪಷ್ಟವಾಗಿ ಏನು ಹೇಳುವುದಕ್ಕೆ ಹೊರಟಿದ್ದೀವಿ ಎಂಬುದನ್ನು ವಿದ್ಯಾರ್ಥಿಗಳಿಗೆ ಮೊದಲು ಸ್ಪಷ್ಟತೆ ಕೊಡಬೇಕು ಆ ಸ್ಪಷ್ಟವಾದ ತಿಳುವಳಿಕೆಗೆ ವಿದ್ಯಾರ್ಥಿಗಳಿಗೆ ಉಂಟಾಗಿ ಕಲಿಕೆ ಅನ್ನೋದು ಅರ್ಥಪೂರ್ಣವಾಗಿರುತ್ತದೆ ಇಡೀ ಬೋಧನೆಯು ಕೂಡ ಈ ಕ್ರಮದಲ್ಲಿ ಸಾಗಬೇಕಾಗುತ್ತದೆ. ಆ ರೀತಿಯಲ್ಲಿ ಸಾಗಿದರೆ ಆ ವಿದ್ಯಾರ್ಥಿಯು ಆ ವಿಷಯದ ಬಗ್ಗೆ ಯಾವುದೇ ಒಂದು ಪ್ರಶ್ನೆ ಕೂಡ ಉತ್ತರಲ್ಲ ಪ್ರತಿ ಪ್ರಶ್ನೆಯು ಕೂಡ ಉತ್ತರ ನೀಡುತ್ತಾನೆ.
ಸರಳದಿಂದ ಸಂಕೀರ್ಣಕ್ಕೆ
ಕಲಿಕೆಯ ಮನೋವೈಜ್ಞಾನಿಕ ನಿಯಮಗಳಂತೆ ವಿದ್ಯಾರ್ಥಿಗಳಿಗೆ ಮೊದಲು ಸರಳ ವಿಚಾರಗಳನ್ನು ಸರಳವಾದ ಒಂದು ಮಾಹಿತಿಗಳನ್ನು ನೀಡುವುದರ ಮುಖಾಂತರ ಆ ವಿಚಾರಗಳನ್ನು ಸಂಕೀರ್ಣ ವಿಚಾರಗಳಾಗಿ ಕಳಿಸಬೇಕು ಸರಳ ವಿಚಾರಗಳನ್ನು ಮೊದಲು ತಿಳಿಸುವುದರಿಂದ ವಿದ್ಯಾರ್ಥಿಗಳಲ್ಲಿ ತುಂಬಾ ಆಸಕ್ತಿ ಮತ್ತು ಆತ್ಮ ವಿಶ್ವಾಸ ಅನ್ನೋದು ಹೆಚ್ಚಾಗುತ್ತದೆ ಇದರಿಂದ ಆ ವಿಷಯದ ಬಗ್ಗೆ ಯಾವುದೇ ಪ್ರಶ್ನೆಗಳಲ್ಲೂ ಕೂಡ ವಿದ್ಯಾರ್ಥಿ ಅನುಮಾನ ಅಥವಾ ಭಯ ಅನ್ನೋದು ಪಡುವುದಿಲ್ಲ. ಸರಳ ವಿಚಾರದ ಆಧಾರದ ಮೇಲೆ ಸಂಕೀರ್ಣ ವಿಚಾರಗಳನ್ನು ಕಳಿಸುವುದರಿಂದ ಯಾವುದೇ ಗೊಂದಲ ಅನ್ನೋದು ಉಂಟಾಗುವುದಿಲ್ಲ
ಉದಾಹರಣೆಗೆ ವಿದ್ಯಾರ್ಥಿಗಳಿಗೆ ಮೊದಲು ಸರಳ ವಾಕ್ಯಗಳ ಬಗೆಗೆ ತಿಳಿಸಬೇಕು ನಂತರ ಮಿಶ್ರ ವಾಕ್ಯಗಳ ಬಗ್ಗೆ ಬೋಧಿಸಬೇಕು ಈ ರೀತಿಲೆ ಮಾಡುವುದದ ಮೊದಲೇ ಮಿಶ್ರ ವಾಕ್ಯಗಳ ಬಗ್ಗೆ ಬೋಧಿಸಿದರೆ ಆ ವಿದ್ಯಾರ್ಥಿಗಳಿಗೆ ಅರ್ಥನೇ ಆಗುವುದಿಲ್ಲ ಮತ್ತು ಆ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿ ಕಲಿಕೆಯಲ್ಲಿ ಉತ್ಸಾಹೀನರಾಗಿರುತ್ತಾರೆ. ಅದರಿಂದ ಯಾವುದೇ ಒಂದು ವಿಷಯವನ್ನು ನಾವು ಕೇಳಬೇಕು ಎಂದುಕೊಂಡರೆ ಆ ವಿಷಯದ ಮೊದಲು ಸರಳವಾದಂತಹ ಕೆಳವು ವಿಷಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು ಆ ಮುಖಾಂತರ ಸರಳದಿಂದ ಸಂಕೀರ್ಣತೆ ಕಡೆಗೆ ನಾವು ಹೋಗಬೇಕಾಗುತ್ತದೆ.
ಮೂರ್ತದಿಂದ ಆಮೂರ್ತಕ್ಕೆ
ವಿದ್ಯಾರ್ಥಿಗಳಿಗೆ ಮೊದಲು ಮುಹೂರ್ತ ವಿಚಾರಗಳನ್ನು ಎಂದರೆ ಅನುಭವ ಬೇದವಾಗುವ ಅಥವಾ ಅನುಭವದಿಂದ ಪರಿಚಯವಾಗಿರುವಂತಹ ವಸ್ತು ಅಥವಾ ಭಾವನೆಗೆ ಸಂಬಂಧಿಸಿದಂತೆ ತಿಳಿಸಿದ ನಂತರ ನಾವು ಒಂದು ವಿಷಯವನ್ನು ಹೇಳಿದ್ದೇವೆ ಅಂತಂದರೆ ಆ ವಿಷಯಕ್ಕೆ ಸಂಬಂಧಪಟ್ಟಂತಹ ಕೆಲವೊಂದು ಸ್ವತಹ ಅವರು ಅನುಭವಿಸಿರುವಂತ ವಿಷಯಗಳು ಏನಿದ್ದಾವೆ ಆ ವಿಷಯಗಳನ್ನು ನಾವು ಮತ್ತೆ ಸ್ಮರಿಸಬೇಕು. ನಿಮ್ಮ ಮನೆಯಲ್ಲಿ ಏನೇನು ನೋಡಿದ್ದೀರಾ ನಮ್ಮ ಪರಿಸರ ಹೇಗಿದೆ ನಮ್ಮ ಒಂದು ತರಗತಿಯಲ್ಲಿ ಏನೇನು ಇದೆ ಈ ರೀತಿಯಲ್ಲಿ ಒಂದು ವಿಷಯಕ್ಕೆ ಸಂಬಂಧಪಟ್ಟಂತಹ ಕೆಲವೊಂದು ತಮಗೆ ಅನುಭವಗಳು ಏನೇನು ಆಗಿರುತ್ತಆ. ನಂತರ ಅಮೂರ್ತ ಪರಿಕಲ್ಪನೆಗಳು ಅಂದರೆ ಅನುಭವಕ್ಕೆ ಬಾರದ ವೀಕ್ಷಣೆ ಹಾಗೂ ಸ್ಪರ್ಶಕ್ಕೆ ನಿಲುಕದಂತ ಕಲ್ಪನೆಗೆ ಮಾತ್ರ ನಿನುಕುವಂತಹ ಪರಿಕಲ್ಪನೆಗಳಾದ ಸತ್ಯ ಅಹಿಂಸೆ ಸೌಂದರ್ಯ ಪ್ರಾಮಾಣಿಕತೆ ಮುಂತಾದವುಗಳನ್ನು ಬೋಧಿಸಬೇಕಾಗುತ್ತದೆ ವಿದ್ಯಾರ್ಥಿಗಳಿಗೆ ಪ್ರಾರಂಭಿಕ ಹಂತದಲ್ಲಿ ಕಲ್ಪನೆಯ ಸಾಮರ್ಥ್ಯವು ಕಡಿಮೆಯಾಗಿರುತ್ತದೆ ಅದರಿಂದ, ನಾವು ತಾವು ಅನುಭವಿಸಿರುವಂತಹ ಕೆಲವೊಂದು ಘಟನೆಗಳನ್ನು ನಾವು ಮೊದಲೇ ತಿಳಿಸಬೇಕಾಗಿರುತ್ತದೆ. ಅಮೂರ್ತ ವಿಚಾರಗಳನ್ನು ಅಥವಾ ಅಮೂರ್ತ ವಸ್ತುಗಳ ಬಗೆಗೆ ಗ್ರಹಿಸುವುದು ತುಂಬಾ ಕಷ್ಟಕರವಾಗಿರುತ್ತದೆ ಎಂದರೆ. ಉದಾಹರಣೆಗೆ ವಿಜ್ಞಾನ ವಿಷಯದಲ್ಲಿ ತುಂಬಾ ಜನರು ಅದರಲ್ಲಿ ಫೇಲ್ ಆಗುವ ತ್ತಾರೆ ಕಾರಣ ವಿಜ್ಞಾನದಲ್ಲಿ ಇರುವಂತಹ ಪಠ್ಯಪುಸ್ತಕದಲ್ಲಿ ಇರುವಂತಹ ಮಾಹಿತಿಯು ನಿಜ ಜೀವನಕ್ಕೂ ತುಂಬಾ ದೂರವಾಗಿರುತ್ತದೆ ಗಣಿತದಲ್ಲಿ ಕೂಡ ತುಂಬಾ ನಮಗೆ ಬೇಕಾಗಿರುವುದಕ್ಕಿಂತ ಹೆಚ್ಚಾಗಿ ನಮಗೆ ಬೇಡವಾದುದ್ದೇ ನಮ್ಮ ಗಣಿತದಲ್ಲಿ ಇರುತ್ತದೆ.
ಉದಾಹರಣೆಗೆ ಮಾದರಿಗಳನ್ನು ಬಳಸಿಕೊಳ್ಳಬೇಕು, ಇನ್ನೂ ಉದಾಹರಣೆ ಜ್ವಾಲಾಮುಖಿಯ ಬಗೆಗೆ ಬೋಧಿಸುವಂಥ ಸಂದರ್ಭದಲ್ಲಿ ಅದರ ಬಗೆಗೆ ಕೇವಲ ವಿಷಯವನ್ನು ತಿಳಿಸುವುದಕ್ಕೆ ಬದಲು ಮಾದರಿ ಪಾಠವನ್ನು ವಿದ್ಯಾರ್ಥಿಗಳಿಗೆ ತೋರಿಸುವ ಆಗಿರಬಹುದು ಅಥವಾ ಚಿತ್ರಗಳನ್ನು ಬಿಡಿಸಿ ಆ ಚಿತ್ರಗಳನ್ನು ಏಕೆ ಮಕ್ಕಳಲ್ಲಿ ತೋರಿಸುವದಾಗಿರಬಹುದು ಮೂರ್ತ ಪರಿಕಲ್ಪನೆ ಯನ್ನಾಗಿ ಮಾಡಿ ಬೋಧಿಸಿದಾಗ ಕಲಿಕೆಯು ತುಂಬಾ ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ ಚಿತ್ರಗಳ ಮುಖಾಂತರ. ಕಥೆಗಳ ಮುಖಾಂತರ ಮತ್ತು ಮಾದರಿ ಪಾಠಗಳ ಮುಖಾಂತರ ವಿಡಿಯೋಗಳ ಮುಖಾಂತರ ಈ ರೀತಿಯಲ್ಲಿ ನಾವು ನಮ್ಮ ತರಗತಿಯನ್ನು ನಾವು ಬೋಧಿಸಿದೆ ಆದಲ್ಲಿ ನಮ್ಮ ತರಗತಿಯು ತುಂಬಾ ಪರಿಣಾಮಕಾರಿಯಾಗುವುದರಲ್ಲಿ ಎರಡು ಮಾತಿಲ್ಲ
FULL PROJECT LINK 🔗👇👇👇👇

