
Records to be maintained in government primary schools In kannada
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ನಿರ್ವಹಿಸಬೇಕಾಗಿರುವ ದಾಖಲೆಗಳು
1. ಮಕ್ಕಳ ದಾಖಲಾತಿ ವಹಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈಸೂರು (ಶಾಲೆಯ ಹೆಸರು) ಮಕ್ಕಳ ದಾಖಲಾತಿ ವಹಿಯನ್ನು ನಿರ್ವಹಿಸಿದೆ. ಇದರಲ್ಲಿ ಒಂದರಿಂದ ಏಳನೇ ತರಗತಿ ಮಕ್ಕಳ ದಾಖಲಾತಿ ವಿವರ. ವಿದ್ಯಾರ್ಥಿಯ ಹೆಸರು ಪೋಷಕರ ಹೆಸರು ಲಿಂಗ ಜಾತಿ ಧರ್ಮ ಜನ್ಮ ದಿನಾಂಕ ವಾರ್ಷಿಕ ಆದಾಯ ಮುಂತಾದ ವಿಷಯಗಳನ್ನು ಒಳಗೊಂಡಿದೆ
2.ಸಂದರ್ಶನ ವಹಿ
ಸಂದರ್ಶನ ವಹಿಯನ್ನು ಶಾಲೆಯು ನಿರ್ವಹಿಸುತ್ತದೆ. ಈ ಶಾಲೆಯು ಅಭಿವೃದ್ಧಿಯತ್ತ ಸಾಗುತ್ತಿರುವ ಶಾಲೆಯಾದರಿಂದ ಅವಾಗವಾಗ ಈ ಶಾಲೆಗೆ ಹಲವಾರು ಸಂಸ್ಥೆಗಳು ಭೇಟಿ ನೀಡುತ್ತವೆ. ಅದರ ಮಾಹಿತಿ ದಿನಾಂಕ ಮತ್ತು ಅಧಿಕಾರಿಗಳ ವಿವರವನ್ನು ಬರೆದು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ.
3.ತಪಾಸಣಾ ವರದಿಯ ಅನುಪಾಲನ ವರದಿಯ
ತಪಾಸಣಾ ವರದಿಯ ಅನುಪಾಲನ ವರದಿಯನ್ನು ಈ ಶಾಲೆಯು ನಿರ್ವಹಿಸುತ್ತಿದೆ ವಾರ್ಷಿಕ ತಪಾಸಣೆ ಆಗಿದ್ದು ತಪಾಸಣಾ ವರದಿಯು ಅನು ಪಾಲನೆ ಆಗುತ್ತದೆ ಮತ್ತು ಉತ್ತಮವಾಗಿ ನಿರ್ವಹಿಸಿದ್ದಾರೆ.
4. ಶಿಕ್ಷಕರ ಮೆಮೋ ವಹಿ
ಈ ಶಾಲೆಯಲ್ಲಿ ಶಿಕ್ಷಕರ ಮೆಮೋ ವಹಿಯನ್ನು ಪುಸ್ತಕವನ್ನು ನಿರ್ವಹಿಸಿದ್ದಾರೆ. ಈ ಪುಸ್ತಕದಲ್ಲಿ ಸಹ ಶಿಕ್ಷಕರಿಗೆ ನೀಡಿದ ಮಾರ್ಗದರ್ಶನ ನೀತಿ ಹಾಗೂ ನಿಯಮಗಳ ಸಂಪರ್ಕ ವಿವರಗಳಿವೆ. ಶಿಕ್ಷಕರ ಮೆಮೋ ಪ್ರತ್ಯೇಕ ಪುಸ್ತಕದಲ್ಲಿ ದಿನಾಂಕ ಶಿಕ್ಷಕರ ಸಹಿ ಹಾಗೂ ಮುಖ್ಯ ಶಿಕ್ಷಕರ ಸಹಿಗಳನ್ನು ಒಳಗೊಂಡಿದೆ.
5. ವಿದ್ಯಾರ್ಥಿಗಳ ಮೆಮೋ ವಹಿ
ಈ ಶಾಲೆಯು ವಿದ್ಯಾರ್ಥಿಗಳ ಮೆಮೊ ಪುಸ್ತಕವನ್ನು ನಿರ್ವಹಿಸಿದೆ. ಈ ಪುಸ್ತಕದಲ್ಲಿ ತರಗತಿಗಳು ನಡೆಯುವ ದಿನಾಂಕಗಳು, ರಜೆ ದಿನಾಂಕಗಳು ಹಾಗೂ ಇತರೆ ಕಾರ್ಯಕ್ರಮಗಳನ್ನು ಬರೆದು ನಿರ್ವಹಿಸಲಾಗಿದ್ದು. ಶೈಕ್ಷಣಿಕ ವರ್ಷದ ಸಂಪೂರ್ಣ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳ ಮೆಮೊ ಪುಸ್ತಕದಲ್ಲಿ ಬರೆಯಲಾಗಿದೆ.
6. ಉಪಾಧ್ಯಾಯರ ಹಾಗೂ ಶಿಕ್ಷಕರ ಹಾಜರಾತಿ ವಹಿ
ಈ ಶಾಲೆಯು ಶಿಕ್ಷಕರ ಹಾಜರಾತಿ ವಹಿಯನ್ನು ನಿರ್ವಹಿಸಿದ್ದಾರೆ. ಈ ವಹಿಯಲ್ಲಿ ಶಿಕ್ಷಕರ ಪ್ರತಿ ದಿನದ ಹಾಜರಾತಿಯನ್ನು ಅದರಲ್ಲಿ ಅವರ ಸಹಿ ಮತ್ತು ಆ ದಿನದ ದಿನಾಂಕವನ್ನು ಪ್ರತಿದಿನ ನಿರ್ವಹಿಸಿದ್ದಾರೆ ನಿರ್ವಹಿಸಲಾಗಿದೆ.
7. ಉಪಾಧ್ಯಾಯರ ರಜೆ ಮಂಜೂರಾತಿ ವಹಿ
ಈ ಶಾಲೆಯು ಉಪಾಧ್ಯಾಯರ ರಜೆ ಮಂಜೂರಾತಿ ಪುಸ್ತಕವನ್ನು ಹೊಂದಿದೆ ಮತ್ತು ಇದರಲ್ಲಿ ಸರ್ಕಾರವು ನಿಗದಿ ಪಡಿಸಿರುವ ಹದಿನೈದು ದಿನಗಳ ರಜೆ ಮತ್ತು ತುರ್ತು ಪರಿಸ್ಥಿತಿಯ ರಜೆಗಳು ಸೇರವೆ ಒಟ್ಟಾರೆಯಾಗಿ ಹೇಳುವುದಾದರೆ ಶಿಕ್ಷಕರ ರಜೆಯ ಮಂಜೂರಾತಿಯನ್ನು ಈ ಪುಸ್ತಕದಲ್ಲಿ ಈ ಶಾಲೆಯು ನಿರ್ವಹಿಸಲಾಗಿದೆ.
8. ಶಿಕ್ಷಕರ ಸಿಬ್ಬಂದಿಯ ಸಂದರ್ಬಿಕ ಮಂಜೂರಾತಿ ವಹಿ
ಶಿಕ್ಷಕರ ಸಿಬ್ಬಂದಿಯ ರಜೆ ಮಂಜೂರಾತಿ ಪುಸ್ತಕವನ್ನು ಈ ಶಾಲೆಯಲ್ಲಿ ನಿರ್ವಹಿಸಲಾಗಿದೆ ಮತ್ತು ಶಿಕ್ಷಕರ ರಜೆಯ ಅವಶ್ಯಕತೆ ಇರುವಾಗ ರಜೆಯ ಅರ್ಜಿಯನ್ನು ಮತ್ತು ದಿನಾಂಕ ಅದರಲ್ಲಿ ಕಾರಣಗಳ ಸಹಿತ ಆ ಪುಸ್ತಕದಲ್ಲಿ ಬರೆದು ಕೊಡಬೇಕು. ಅದರಿಂದ ಈ ಶಾಲೆಯು ಈ ಎಲ್ಲಾ ಶಿಕ್ಷಕರ ಸಿಬ್ಬಂದಿಯ ಸಂದರ್ಬಿಕ ರಜೆ ಮಂಜೂರಾತಿ ವಹಿಯನ್ನು ನಿರ್ವಹಿಸಲಾಗಿದೆ.
9. ತರಗತಿವಾರು ವಿದ್ಯಾರ್ಥಿಗಳ ಹಾಜರಾತಿ ವಹಿ.
ಈ ಶಾಲೆಯಲ್ಲಿ ದಿನಕ್ಕೆ ಎರಡು ಸಲ ಬೆಳಗ್ಗೆ ಮತ್ತು ಮಧ್ಯಾಹ್ನ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಹಾಜರಾತಿಯನ್ನು ಹಾಕಲಾಗುತ್ತದೆ ಪ್ರತಿ ತರಗತಿಗೂ ಪ್ರತ್ಯೇಕವಾದ ಹಾಜರಾತಿಯನ್ನು ಆಯಾ ತರಗತಿಯ ಶಿಕ್ಷಕರು ಉತ್ತಮವಾಗಿ ನಿರ್ವಹಿಸಿದ್ದಾರೆ.
10. ಶಾಲಾ ನೊಂದಣಿ ಸಂಬಂಧಿಸಿದಂತೆ ವಹಿ.
ಈ ಶಾಲೆಯು ಯಾವುದೇ ನೋಂದಣಿಗೆ ಸಂಬಂಧಿಸಿದಂತೆ ವಹಿಯನ್ನು ನಿರ್ವಹಿಸಿಲ್ಲ.
11. ಶಾಲಾ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ವಹಿ
ಈ ಶಾಲೆಯು ಶಾಲಾ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದ ವಹಿಯನ್ನು ನಿರ್ವಹಿಸಿದೆ. ಹಾಗೂ ನವೀಕರಣಕ್ಕೆ ಸಂಬಂಧಿಸಿದ ವಿವಾರಗಳು ಖರ್ಚು ವೆಚ್ಚಗಳನ್ನು ಕೂಡ ಇದರಲ್ಲಿ ಬರೆಯಲಾಗಿದೆ.
11. ಕ್ರೋಡಿ ಕೃತ ಅಂಶ ವಹಿ
ಈ ಶಾಲೆಯಲ್ಲಿ ಕ್ರೂಢೀಕೃತ ಅಂಕದ ವಹಿಯನ್ನು ನಿರ್ವಹಿಸಲಾಗಿದೆ ಈ ವಹಿಯಲ್ಲಿ ಪ್ರತಿ ವಿದ್ಯಾರ್ಥಿಗಳ ಅಂಶ ಶೇಕಡವಾರು ಹಾಗೂ ಪಡೆದ ಶ್ರೇಣಿಯ ವಿವರಗಳನ್ನು ಬರೆದು ನಿರ್ವಹಿಸಲಾಗಿದೆ. ಪ್ರತಿ ವಿದ್ಯಾರ್ಥಿಯ ಶೈಕ್ಷಣಿಕ ವರ್ಷದ ಪ್ರಗತಿಯನ್ನು ಬರೆಯಲಾಗಿದೆ.
12. ಗ್ರಂಥಾಲಯ ವಹಿ
ಈ ಶಾಲೆಯಲ್ಲಿ ಗ್ರಂಥಾಲಯ ವಹಿಯನ್ನು ನಿರ್ವಹಿಸಿದ್ದಾರೆ. ಈ ಗ್ರಂಥಾಲಯ ಪುಸ್ತಕದಲ್ಲಿ ವಿದ್ಯಾರ್ಥಿಯ ಹೆಸರು ಮತ್ತು ಸಹಿಯನ್ನು ಹಾಕಿಸಿಕೊಳ್ಳುತ್ತಾರೆ, ಪುಸ್ತಕದ ಹೆಸರು ಆ ಪುಸ್ತಕದಲ್ಲಿ ಸಂಖ್ಯೆ ಶಾಲೆಯ ಮೊಹರು ಹಾಕಲಾಗುತ್ತದೆ.
14. ದಿನಾಂಕ ವಹಿ ಶುಲ್ಕ ವಸೂಲಾತಿ ವಹಿ
ಈ ಶಾಲೆಯು ದಿನ ವಹಿ ಶುಲ್ಕ ವಸೂಲಾತಿ ವಹಿಯನ್ನು ನಿರ್ವಹಿಸುತ್ತಿಲ್ಲ (ಏಕೆಂದರೆ ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿ ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ ಇದು ಕೇವಲ ಖಾಸಗಿ ಶಾಲೆಗಳಲ್ಲಿ ಮಾತ್ರ ಈ ಶುಲ್ಕ ವಾಸಲತಿ ಪುಸ್ತಕವನ್ನು ನಿರ್ವಹಿಸುತ್ತಾರೆ)
15. ಕ್ರೋಡಿಕೃತ ಶುಲ್ಕ ವಸೂಲತಿ ಶುಲ್ಕ
ಈ ಶಾಲೆಯು ವಿದ್ಯಾರ್ಥಿಗಳಿಂದ ಯಾವುದೇ ಕ್ರೋಡಿಕೃತ ಸಂಬಂಧಿಸಿದಂತೆ ಶುಲ್ಕವನ್ನು ವಸೂಲಿಯನ್ನು ಮಾಡಿಲ್ಲ ಅದರಿಂದ ಕ್ರೋಡಿಕೃತ ಶುಲ್ಕ ವಾಸ್ತುಲಾತಿ ವಹಿಯನ್ನು ನಿರ್ವಹಿಸಿಲ್ಲ. (ಆ ಕೆಲವು ಶಾಲೆಗಳು ಅಥವಾ ಕಾಲೇಜುಗಳಲ್ಲಿ ಈ ಕ್ರೂಡಿಕೃತ ಶುಲ್ಕ ವಸುಲತಿ ಶುಲ್ಕವನ್ನು ತೆಗೆದುಕೊಳ್ಳುತ್ತಾರೆ)
16. ಶುಲ್ಕ ವಸೂಲಾತಿ ಬೇಡಿಕೆ ವಹಿ
ಈ ಶಾಲೆಯು ಯಾವುದೇ ಶುಲ್ಕ ವಸೂಲಾತಿ ಬೇಡಿಕೆ ವಹಿಯನ್ನು ನಿರ್ವಹಿಸಲಾಗಿಲ್ಲ.
17. ರಸೀದಿ ಪುಸ್ತಕಗಳ ದಾಸ್ತಾನು ವಹಿ ಹಾಗೂ ವಿವರಣ ವಹಿ.
ಈ ಶಾಲೆಯಲ್ಲಿ ರಸೀದಿ ಪುಸ್ತಕಗಳ ದಾಸ್ತಾನು ಹೋಗಿ ಹಾಗೂ ವಿವರಣವಹಿಯನ್ನು ನಿರ್ವಹಿಸಲಾಗಿದೆ ಶಾಲಾ ಶುಲ್ಕ ಹಾಗೂ ಟಿಸಿ ಅಥವಾ ವರ್ಗಾವಣೆ ಪತ್ರಕ್ಕೆ ತೆಗೆದುಕೊಂಡಾಗ ಶುಲ್ಕದ ರಸಿದಿ ಪುಸ್ತಕಗಳ ದಾಸ್ತಾನು ವಹಿ ಹಾಗೂ ರಶೀದಿ ವಿತರಣಾ ವಹಿಯನ್ನು ಹೊಂದಿದೆ.
18. ಇಂದ ವಹಿ
ಈ ಶಾಲೆಯಲ್ಲಿ ಇಂದ ವಹಿಯನ್ನು ಪುಸ್ತಕವನ್ನು ಬರೆದು ನಿರ್ವಹಿಸಿದ್ದಾರೆ ಶಾಲೆಗೆ ಬೇರೆ ಬೇರೆ ಇಲಾಕೆಗಳಿಂದ ಅನೇಕ ಪತ್ರಗಳು ಬರುತ್ತವೆ ಆ ಪತ್ರಗಳಲ್ಲಿ ಎಂದ ಎಂದರೆ ಯಾವ ವಿಳಾಸದಿಂದ ಪತ್ರವೂ ಕಳೆ ಕಳುಹಿಸಲಾಗಿದೆ ಎಂದು ಬರೆಯಲಾಗುತ್ತದೆ ಮತ್ತು ಶಾಲೆಯಲ್ಲಿ ಈ ಪತ್ರಗಳು ಬಂದ ವಿಳಾಸವನ್ನು ದಿನಾಂಕದೊಂದಿಗೆ ಬರೆದು ನಿರ್ವಹಿಸಲಾಗಿದೆ.
19.ಗೆ ವಹಿ
ಈ ಶಾಲೆಯಲ್ಲಿ ಗೆ ವಹಿಯನ್ನು ಪುಸ್ತಕವನ್ನು ನಿರ್ವಹಿಸಲಾಗಿದೆ ಶಾಲೆಯಲ್ಲಿ ವಿವಿಧ ಕಾರಣಗಳಿಗೆ ಅಳವು ಬೇಡಿಕೆಗಳನ್ನು ಪಡೆಯಬೇಕಾದರೆ ಹಾಗೂ ಪ್ರತ್ಯೇಕ ಅವಶ್ಯಕತೆಗಳಿದ್ದರೆ ಶಾಲಾ ಸಿಬ್ಬಂದಿಯವರು ಆಯಾ ವಿಳಾಸಗಳು ತಲುಪಬೇಕಾದ ವಿವರವನ್ನು ಪತ್ರದಲ್ಲೂ ಹಾಗೂ ಶಾಲೆಯ ಪುಸ್ತಕದಲ್ಲೂ ಗೆ ವಹಿಯನ್ನು ಪುಸ್ತಕದಲ್ಲೂ ಬರೆದು ನಿರ್ವಹಿಸಲಾಗುತ್ತದೆ.
20. ಶಿಕ್ಷಕರ ಮತ್ತು ಸಿಬ್ಬಂದಿಯವರ ಚಲನ ವಲನ ವಹಿ
ಈ ಶಾಲೆಯಲ್ಲಿ ಶಿಕ್ಷಕರ ಮತ್ತು ಸಿಬ್ಬಂದಿಯವರ ಚಲನವಲನ ವಹಿಯನ್ನು ಹೊಂದಿದೆ ಇದರಲ್ಲಿ ಶಿಕ್ಷಕರು ತಮ್ಮ ದಿನನಿತ್ಯದ ಡೈರಿಯಲ್ಲಿ ದಿನದ ಚಲನ ವಲನ ತರಗತಿಗಳನ್ನು ತೆಗೆದುಕೊಂಡಿದ್ದು ಹಾಗೂ ಕಚೇರಿ ಕೆಲಸಗಳನ್ನು ತೊಡಗಿದ್ದು ಎಲ್ಲವನ್ನು ಬರೆದು ಸಹಿಯನ್ನು ಹಾಕಿ ನಿರ್ವಹಿಸಲಾಗಿದೆ ಮತ್ತು ಈ ಶಾಲೆಯಲ್ಲಿ ಈ ಪುಸ್ತಕವನ್ನು ಸರಿಯಾದ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸಲಾಗಿದೆ.
21. ಶಿಕ್ಷಕರ ಮತ್ತು ಸಿಬ್ಬಂದಿಯವರ ಸೇವಾ ಪುಸ್ತಕಗಳ ನಿರ್ವಹಣೆ ವಹಿ
ಈ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಮತ್ತು ಸಿಬ್ಬಂದಿಯವರ ಸೇವಾ ಪುಸ್ತಕಗಳ ನಿರ್ವಹಣೆ ವಹಿಯನ್ನು ಒಳಗೊಂಡಿದೆ ಶಾಲಾ ನೊಂದಣಿಯ ದಿನಾಂಕದಿಂದ ಹಿಡಿದು ಇಂದಿನವರೆಗೂ ಕೂಡ ಕಂಡ ಸೇವಾ ಪುಸ್ತಕಗಳ ನಿರ್ವಹಣೆಯಿಂದ ಶಾಲೆ ಪ್ರಾರಂಭ ವಾದ ದಿನದಿಂದ ಸೇವೆ ಸಲ್ಲಿಸಿದ ಶಿಕ್ಷಕರ ಹೆಸರು ಅನುಭವ ಶಿಕ್ಷಕರು ಬೋಧಿಸುತ್ತಿರುವ ವಿಷಯ ಸೇರಿದಂತೆ ಸಂಪೂರ್ಣ ವಿವರ ಈ ವಹಿಯನ್ನು ನಿರ್ವಹಿಸಲಾಗಿದೆ
22. ಸಭೆ ನಡಾವಳಿ ವಹಿ
ಈ ಶಾಲೆಯಲ್ಲಿ ಸಭೆ ನಡವಳಿ ವಹಿಯನ್ನು ನಿರ್ವಹಿಸಲಾಗಿದೆ ಶಿಕ್ಷಕರ ಸಭೆ ಸೇರಿದಾಗ ಶಾಲೆಗೆ ಸಂಬಂಧಿಸಿದಂತಹ ವಿಚಾರಗಳನ್ನು ಚರ್ಚೆ ಮಾಡಿ ಈ ವಿಷಯವನ್ನು ಸಭೆ ನಡೆಾವಳಿ ಪುಸ್ತಕದಲ್ಲಿ ಬರೆಯಲಾಗುತ್ತದೆ ಜೊತೆಗೆ ಹಾಜರಾದ ಶಿಕ್ಷಕರ ಸಹಿ ಮತ್ತು ದಿನಾಂಕವನ್ನು ಬರೆಯಲಾಗುತ್ತದೆ.
23. ದಾನ ದತ್ತಿ ದಾಖಲೆ ವಹಿ ನಿರ್ವಹಣೆ ವಹಿ.
ಈ ಶಾಲೆಯಲ್ಲಿ ದಾನದತ್ತಿ ದಾಖಲೆ ವಹಿ ನಿರ್ವಹಣೆ ಮಾಡಲಾಗಿದೆ. ಏನಾದರೂ ದಾನ ದತ್ತಿ ಕೊಡಿಗೆಗಳು ಬಂದರೆ ಅದನ್ನು ಈ ವಹಿಯಲ್ಲಿ ಬರೆದು ನಿರ್ವಹಿಸಲಾಗುತ್ತದೆ.
24. ಖಜಾನೆ ಜಮಾ ವಹಿ.
ಈ ಶಾಲೆಯಲ್ಲಿ ಖಜಾನೆ ಜಮಾ ವಹಿ ನಿರ್ವಹಿಸಲಾಗಿದೆ ಅದರಲ್ಲೂ ಖಜಾನೆ ಜಮಕ್ಕೆ ಸಂಬಂಧಿಸಿದ ಬಗ್ಗೆ ಮಾಹಿತಿಯನ್ನು ಇದರಲ್ಲಿ ಬರೆದು ನಿರ್ವಹಿಸಲಾಗಿದೆ.
25. ಪಠ್ಯಪುಸ್ತಕ ಮತ್ತು ಬೈಸಿಕಲ್ ವಿತರಣೆ ಸಹಿ
ಈ ಶಾಲೆಯಲ್ಲಿ ಪಠ್ಯಪುಸ್ತಕ ಬಹಿ ನಿರ್ವಹಿಸಲಾಗಿದೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪ್ರತಿಯೊಂದು ವಿದ್ಯಾರ್ಥಿಗೂ ಪಠ್ಯ ಪುಸ್ತಕಗಳನ್ನು ಉಚಿತವಾಗಿ ಸರ್ಕಾರ ವಿತರಣೆ ಮಾಡುತ್ತಿದೆ ಈ ವೈಯಲ್ಲಿ ವಿದ್ಯಾರ್ಥಿಯ ವಹಿ ಹೆಸರು ತರಗತಿ ಸ್ವೀಕೃತಿಯ ದಿನಾಂಕ ಗಳನ್ನು ಬರೆಯಲಾಗುತ್ತದೆ ಮತ್ತು ಇತ್ತೀಚಿನ ದಿನಗಳಲ್ಲಿ ಬೈಸಿಕಲ್ ವಹಿ ಎಂಬುದು ಇಲ್ಲ ಏಕೆಂದರೆ ಬೈಸಿಕಲ್ ಬಹಿಯನ್ನು ಬೈಸಿಕಲ್ ಕೊಟ್ಟರೆ ಮಾತ್ರ ನಿರ್ವಹಿಸುತ್ತಾರೆ ಈಗ ಬೈಸಿಕಲ್ ವಿತರಣೆ ನಿಲ್ಲಿಸಲಾಗಿದೆ.
ಇನ್ನು ಪ್ರಶ್ನೆಗಳು ಇದಾವೆ ಸೊ ಅವುಗಳನ್ನು ಸಂಪೂರ್ಣ ನೋಡಬೇಕು ಎಂದರೆ ಎಲ್ಲಿ ಕೆಳಗಡೆ ಲಿಂಕ್ ಇದೆ ಸೊ ಇದರ ಮೇಲೆ ಕ್ಲಿಕ್ ಮಾಡಿದರೆ ನೀವು ಇನ್ನೂ ಒಟ್ಟಾರೆಯಾಗಿ 67 ಕ್ವೆಶ್ಚನ್ಸ್ ಗಳನ್ನು ಕೂಡ ನೀವು ವೀಕ್ಷಿಸಬಹುದು
FULL PROJECT LINK 👇👇👇
DOWNLOAD
