
Titanic Heroine Nanna Cheluve Song Reel 20
ಬೋಧನೆಯ ಪರಿಕಲ್ಪನೆ
ಬೋಧನೆ ಎಂಬುದು ಶಿಕ್ಷಣ ಪ್ರಕ್ರಿಯೆಯಲ್ಲಿ ಒಂದು ಮಹತ್ವದ ಭಾಗವಾಗಿದೆ ಪ್ರತಿಯೊಬ್ಬ ಶಿಕ್ಷಕರು ತಮ್ಮ ಜೀವನದಲ್ಲಿ ಉತ್ತಮವಾದಂತಹ ವಿದ್ಯಾರ್ಥಿಗಳನ್ನು ತಯಾರಿಸಬೇಕು ಎಂದರೆ ನಮ್ಮ ಸಮಾಜದಲ್ಲಿ ಶಿಕ್ಷಕರಿಗೆ ಇರುವಂತ ಬೆಲೆ ಬೇರೆ ಯಾರಿಗೂ ಇಲ್ಲ ಏಕೆಂದರೆ ಸ್ವಾಮಿ ವಿವೇಕಾನಂದವರು ಒಂದು ವಿಷಯವನ್ನು ಹೇಳಿದ್ದಾರೆ ನಮಗೆ ಹತ್ತು ಜನ ಯುವಕರನ್ನು ಕೊಡಿ ನಾನು ಅವರನ್ನು ಬೋಧನೆಯ ಮೂಲಕ ಇಡೀ ಜಗತ್ತನ್ನೇ ಇಡೀ ದೇಶವನ್ನೇ ಬದಲಾಯಿಸುತ್ತೇನೆ ಎಂದು ಹೇಳುತ್ತಾರೆ ಈ ಬೋಧನೆಗೆ ಅಷ್ಟೊಂದು ಮಹತ್ವ ಇದೆ.. ಅದೇ ರೀತಿ ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ಕೂಡ ಈ ಬೋಧನೆಗೆ ಅತ್ಯಂತ ಮಹತ್ವದ ಒಂದು ಭಾಗವಾಗಿದೆ ಎಂದು ಕೂಡ ಹೇಳಬಹುದು ಈ ಬೋಧನೆ ಎಂಬುದು ಕೇವಲ ಒಂದು ಭಾಷಣ ಮಾತ್ರವಲ್ಲ ಇದು ಬೋಧನೆ ಎಂಬುದು ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವೆ ನಡೆಯುವ ಅತ್ಯಂತ ಮಹತ್ವದ ಕ್ರಿಯೆ ಅವರಲ್ಲಿರುವಂತಹ ಸಂಭಾಷಣೆ ಆಗಿರಬಹುದು. ತರಗತಿಯಲ್ಲಿ ವಿಶ್ಲೇಷಣಾತ್ಮಕವಾಗಿ ಕೆಲವೊಂದು ಸಂಘಟನೆಗಳು ಏನಿರುತ್ತೆ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವೆ ಅನನ್ಯ ಕ್ರಿಯೆ ಎಂದು ಕೂಡ ನಾವು ಹೇಳಬಹುದು. ತರಗತಿಯಲ್ಲಿ ವಿದ್ಯಾರ್ಥಿಗಳ ಮುಂದೆ ನಿಂತು ತೋಚದನ್ನು ಹೇಳಿ ಪರೀಕ್ಷಿಸುವುದು ಬೋಧನೆ ಆಗುವುದಿಲ್ಲ ಕೇವಲ ಬೋಧನೆ ಎಂಬುದು ವಿದ್ಯಾರ್ಥಿಗಳ ಮುಂದೆ ಯಾವುದೋ ಒಂದು ವಿಷಯವನ್ನು ಹೇಳುವುದು ಮಾತ್ರ ಅದು ಬೋಧನೆ ಅನ್ನುವುದಿಲ್ಲ ಬೋಧನೆ ಎಂದರೆ ಅದು ಬೋಧನೆಯು ವಿದ್ಯಾರ್ಥಿ ಮತ್ತು ಶಿಕ್ಷಕ ವಿಷಯಗಳ ನಡುವೆ ಸಂಬಂಧವನ್ನು ಸ್ಥಾಪಿಸುವುದಾಗಿರುತ್ತದೆ. ಯಾವುದೇ ಒಂದು ವಿಷಯದ ಬಗ್ಗೆ ನಾವು ವಿದ್ಯಾರ್ಥಿಗಳಿಗೆ ತಿಳಿಸ್ತಾ ಇದೀವಿ ಅಂತ ಅಂದ್ರೆ ಆ ವಿದ್ಯಾರ್ಥಿಗೂ ಮತ್ತು ಶಿಕ್ಷಕರಿಗೂ ಕೂಡ ಒಂದು ವಿಷಯದ ನಾಡಿಗೆ ಒಂದು ಸಂಬಂಧ ಅನ್ನೋದು ಸ್ಥಾಪನೆ ಆಗಿರಬೇಕು ಬೋಧನೆ ಎಂಬುದು ಒಂದು ಯಾಂತ್ರಿಕ ಕಾರ್ಯವಲ್ಲ ಅದು ಒಂದು ಜಟಿಲ ಕಷ್ಟಕರ ಸ್ಪರ್ಧಾತ್ಮಕ ಒಂದು ಕೆಲಸವಾಗಿದೆ ಅಷ್ಟೊಂದು ಕಷ್ಟಕರವಾಗಿರುವಂಥದ್ದು ಈ ಬೋಧನೆ. ಬೋಧನೆಯನ್ನು ಸಾಧನೆಗಾಗಿ ಮಾಗು ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಅನುಭವಗಳನ್ನು ನೀಡುವ ಮುಖಾಂತರ ಒಂದು ಸಂಕೀರ್ಣ ಕಲೆಯಾಗಿದೆ.
ಬೋಧನೆಯ ಲಕ್ಷಣಗಳು
- ಬೋಧನೆಯು ಒಂದು ತ್ರೀ ಮುಖ ಪ್ರಕ್ರಿಯೆ. ಬೋಧನೆ ಎಂಬುದು ಒಂದೇ ದಿಕ್ಕಿನಲ್ಲಿ ಇದು ನಡೆಯುವುದಿಲ್ಲ ಇದು ಬೋಧನೆ ಎಂಬುದು ಪ್ರತಿಯೊಂದು ದಿಕ್ಕಿನಲ್ಲಿ ಕೂಡ ಇದು ಚಲನೆ ಬಲನೆಗಳನ್ನು ಮಾಡುತ್ತದೆ ಇದು ಮುಖ್ಯವಾಗಿ ಮೂರು ಮುಖಗಳಾಗಿ ಒಂದು ಪ್ರಕ್ರಿಯೆ ನಡೆಯುತ್ತದೆಯೋ ಅದಕ್ಕೆ ನಾವು ಬೋಧನೆಯು ಒಂದು ಪ್ರಕ್ರಿಯೆ ಎಂದು ಕೂಡ ಹೇಳಬಹುದು
- ಕಲಿಕೆಯ ಕಡೆಗೆ ಕಲಿಕಾರ್ಥಿಯನ್ನು ಪ್ರಚೋದಿಸುವುದು ಇಲ್ಲಿ ನಾವು ಗಮನಿಸಬೇಕಾದ ಅಂಶ ಏನು ಅಂದರೆ, ಶಿಕ್ಷಕರು ಬೋಧನೆಯನ್ನು ಮಾಡುತ್ತಾರೆ ಆ ಬೋಧನೆಯನ್ನು ಮಾಡಿರುವಂತಹ ವಿಚಾರಗಳು ಆಗಿರಬಹುದು ಕೆಲವಂದು ಅಂಶಗಳು ಆಗಿರಬಹುದು ಕೆಲವೊಂದು ಗುಣಮಟ್ಟ ವಾದಂತಹ ಕೆಲವು ಪದಗಳು ಆಗಿರಬಹುದು ಆ ಪದಗಳು ವಿದ್ಯಾರ್ಥಿಗಳಿಗೆ ಏಕೆ ತಲುಪಬೇಕು ಹೇಗೆ ಆ ವಿದ್ಯಾರ್ಥಿಯ ಮನಸ್ಸನ್ನು ಮುಟ್ಟಬೇಕು ಎಂಬುದು ಈ ಒಂದು ಬೋಧನೆ ಮೂಲಕ ಆ ಕಲಿಕಾರ್ಥಿ ವಿದ್ಯಾರ್ಥಿಗಳನ್ನು ಇದು ಪ್ರಚಲಿಸುತ್ತದೆ.
- ಬೋಧನೆಯು ಕಲಿಕಾರ್ಥಿಯ ಮಟ್ಟ ಹಾಗೂ ಅವರ ಪೂರ್ವಜ್ಞಾನದರಿತವಾಗಿರುತ್ತದೆ ಇದು ಬೋಧನೆ ಎಂಬುದು ಕೇವಲ ಒಂದು ಬೋಧನೆ ಅಲ್ಲ ಇದು ಅವರ ಒಂದು ಜ್ಞಾನವನ್ನು ಹೆಚ್ಚಿಸುವುದಾಗಿರುತ್ತದೆ ಅವರ ಪೂರ್ವಜ್ಞಾನವನ್ನು ಅವಲಂಬಿಸಿ ಅವರ ಜ್ಞಾನಮಟ್ಟವನ್ನು ಇದು ಹೆಚ್ಚು ಮಾಡುತ್ತದೆ.
- ಬೋಧನೆಯು ಸೂಕ್ತ ಚಟುವಟಿಕೆಗಳ ಮೂಲಕ ಕಲಿಕಾ ಅನುಭವಗಳನ್ನು ನೀಡುವುದು. ನಾವು ಈಗಾಗಲೇ ತಿಳಿದಿರುವಂತಹ ಪ್ರಕಾರ ಕೇವಲ ಬೋಧನೆ ಎಂಬುದು ವಿಷಯಕ್ಕೆ ಸಂಬಂಧಿಸಿದಂತೆ ಆಗಿರಬೇಕು ಮತ್ತು ಆ ಒಂದು ಬೋಧನೆ ಅನ್ನೋದು ಒಂದು ಗುರಿ ಉದ್ದೇಶಗಳನ್ನು ಅನೋದ್ ಇಟ್ಕೊಂಡಿರಬೇಕು ಮತ್ತು ಕಲಿಕಾ ಅನುಭವಗಳನ್ನು ಅದಕ್ಕೆ ಬೇಕಾಗಿರುವಂತಹ ಸೂಕ್ತ ಚಟುವಟಿಕೆಗಳನ್ನು ಮತ್ತು ಮಾರ್ಗದರ್ಶಕವನ್ನು ಮೊದಲೇ ನಾವು ನಿರ್ಧರಿಸಿರಬೇಕು.
- ಬೋಧನೆಯು ಪೂರ್ವ ನಿರ್ದಾರಿತ ಗುರಿ ಮತ್ತು ಉದ್ದೇಶಗಳಿಗೆ ಅನುಗುಣವಾಗಿರುತ್ತದೆ ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ಮುಖ್ಯವಾಗಿ ಕೆಲವೊಂದು ವಾರ್ಷಿಕವಾಗಿ ಮತ್ತು ಆರು ತಿಂಗಳಿಗೆ ಒಮ್ಮೆ ಕೆಳಬಂದು ಗುರಿ ಉದ್ದೇಶಗಳು ತಮಗೆ ಶಿಕ್ಷಕರಿಗೆ ಇರುತ್ತದೆ ಮತ್ತು ವಿದ್ಯಾರ್ಥಿಗಳಿಗೂ ಕೂಡ ಇರುತ್ತದೆ ಕೆಲವು ಗುರಿಗಳನ್ನು ಇಟ್ಟುಕೊಂಡು ಆ ಗುರಿಗಳಿಗೆ ಅನುಗುಣವಾಗಿ ಆ ಉದ್ದೇಶಗಳನ್ನು ಅಂತಹ ಹಂತವಾಗಿ ಮುಗಿಸಿಕೊಂಡು ವಿದ್ಯಾರ್ಥಿಗಳನ್ನು ಜ್ಞಾನದ ಕಡೆಗೆ ಕರೆದುಕೊಂಡು ಹೋಗಬೇಕಾಗುತ್ತದೆ. ಇದು ಮೊದಲೇ ಒಂದು ವರ್ಷದಲ್ಲಿ ಇಷ್ಟನ್ನು ಮಾತ್ರ ಓದಬೇಕು ಎಷ್ಟು ಪಾಠಗಳನ್ನು ಮಾಡಿರಬೇಕು ಇಷ್ಟು ಟೆಸ್ಟ್ ಗಳನ್ನು ನಾವು ಬರಿಸಬೇಕು ಎಂಬುದನ್ನು ಮೊದಲೇ ಸರ್ಕಾರ ನಿರ್ಧರಿಸುತ್ತದೆ ಆ ನಿರ್ಧರಿಸಿರುವಂತಹ ವಿಷಯವನ್ನು ಶಿಕ್ಷಕರು ಪೂರ್ವ ನಿರ್ದಾರಿತ ಗುರಿ ಮತ್ತು ಉದ್ದೇಶಗಳು ಏನಿರುತ್ತವೆಯೋ ಉದ್ದೇಶಗಳ ಅನುಗುಣವಾಗಿ ಅವರು ಬೋಧನೆಯನ್ನು ಮಾಡುತ್ತಾರೆ.
- ಬೋಧನೆಯಲ್ಲಿ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಮೂಡಿಸಿರಬೇಕು ಬೋಧನೆ ಕೇವಲ ಮುಂಜಾನೆಯಿಂದ ಸಾಯಂಕಾಲ ವರೆಗೆ ನಾವು ಏನೋ ಒಂದು ವಿಷಯದ ಬಗ್ಗೆ ಹೇಳುತ್ತೇವೆ. ಆದರೆ ಆ ವಿದ್ಯಾರ್ಥಿಗೆ ಆಸಕ್ತಿ ಇದೆಯೇನೋ ಅಥವಾ ಇಲ್ಲ ಎಂದು ಗೊತ್ತಾಗಲ್ಲ ಆದ್ದರಿಂದ ಆ ವಿದ್ಯಾರ್ಥಿಗೆ ಯಾವುದೇ ತರದಾದಂತಹ ಆಸಕ್ತಿಯನ್ನು ಪ್ರತಿ ಬಾರಿ ಮೂಡಿಸುತ್ತಾ ಆ ಬೋಧನೆಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿರಬೇಕು ಬೋಧನೆಯಲ್ಲಿ ತನ್ನ ಒಂದು ಗ್ರಹಿಸು ಅಂತ ಶಕ್ತಿ ವಿದ್ಯಾರ್ಥಿಗಳಿರಬೇಕು ಮತ್ತು ವರ್ತನೆಯಲ್ಲಿ ಬದಲಾವಣೆಯನ್ನುಂಟು ಮಾಡುವದು.
- ಬೋಧನೆಯು ವಿದ್ಯಾರ್ಥಿಯ ವಯಸ್ಸು ಆಸಕ್ತಿಗೆ ಅನುಕೂಲವಾಗಿರುತ್ತದೆ ಬೋಧನೆ ಸಣ್ಣ ಮಕ್ಕಳಿಗೆ ಹೇಗೆ ಹೇಳಕೊಡಬೇಕು ಅದೇ ವಿಷಯವನ್ನು ದೊಡ್ಡವರಾಗಿ ಹೇಗೆ ಹೇಳ್ಕೊಡಬೇಕು ಎಂಬುದು ನಾವು ನಿರ್ಧರಿಸಬೇಕಾಗುತ್ತದೆ. ಪ್ರತಿಯೊಬ್ಬರಿಗೂ ಕೂಡ ಅದೇ ರೀತಿಯಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ ಏಕೆಂದರೆ ಒಂದು ವಿಷಯವನ್ನು ಪ್ರತಿಯೊಬ್ಬರೂ ಕೂಡ ತಮಗೆ ಅನುಗುಣವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.
- ಬೋಧನೆಯು ಕಲಿಕೆಗೆ ಮಾರ್ಗದರ್ಶನ ಮತ್ತು ಸಹಾಯವನ್ನು ನೀಡುತ್ತದೆ ಇದು ಇದು ತಮ್ಮ ಜೀವನದಲ್ಲಿ ಹೇಗೆ ಮುಂದುವರಿಸಿಕೊಂಡು ಹೋಗಬೇಕು ಮತ್ತು ಏಕೆ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದು ಈ ಒಂದು ಬೋಧನೆಯ ಮೂಲಕ ಮಾರ್ಗದರ್ಶನ ಅನ್ನೋದು ನಮಗೆ ಸಿಗುತ್ತದೆ
ಬೋಧನೆಯ ವಿಧಗಳು:
ಒಂದು ಗೊತ್ತಾದ ಗುರಿ ಉದ್ದೇಶಗಳನ್ನು ಸಾಧಿಸುವುದು ಬೋಧನೆ ಆದರೆ ಆ ಗುರಿ ಉದ್ದೇಶಗಳನ್ನು ತಲುಪುವ ದಾರಿಗಳು ಬೋಧನ ವಿಧಾನಗಳಾಗಿವೆ
- ಆಗಮನ ಪದ್ಧತಿ/Inductive
- Methodನಿಗಮನ ಪದ್ಧತಿ/Deductive Method
- ಕಥನ ಪದ್ಧತಿ/Story Telling Method
- ಚರ್ಚಾ ಪದ್ಧತಿ/Discussion Method
- ಪ್ರಶ್ನೋತ್ತರ/ಸಾಕ್ರಟಿಸ್ ವಿಧಾನ/Question-Answer/Socratic Method
- ಯೋಜನೆ ಪದ್ಧತಿ/Project Method
- ಸಹಪಾಠ್ಯ ಚಟುವಟಿಕೆಗಳ ವಿಧಾನ/Co-curricular Activities Method
- ಮೌಲ್ಯ ಸ್ಪಷ್ಟೀಕರಣ ವಿಧಾನ/Value clarification Method
- ಅನ್ವೇಷಣಾ ವಿಧಾನ/Inquiry Method
- ಅವಲೋಕನಾ ವಿಧಾನ/Observation Method
- ಸ್ವಯಂ ಅಧ್ಯಯನ ವಿಧಾನ/Self Study Method
- ನಿಯೋಜನೆ ವಿಧಾನ/Assignment Method
- ಪಾತ್ರಾಭಿನಯ ವಿಧಾನ/Role Play Method
- ದೃಶ್ಯ ಶ್ರವಣೋಪಕರಣ ವಿಧಾನ/Audio Visual Method
- ಕಂಪ್ಯೂಟರ್ ಸಹಾಯಭರಿತ ಬೋಧನಾ ವಿಧಾನ/Computer Assist Instruction Method
- ಮನೋವೈಜ್ಞಾನಿಕ ಆಟಗಳ ವಿಧಾನ/Psychological Games Method
- ಸರ್ವೇಕ್ಷಣಾ ವಿಧಾನ/Survery Method
- ಪ್ರಯೋಗಾಲಯ ವಿಧಾನ/Laboratory Method
- ಪಠ್ಯಪುಸ್ತಕ ವಿಧಾನ/Text Book Method
- ಕ್ರೀಡಾ ವಿಧಾನ/Playway Method
- ಸಂಶೋಧನಾ ವಿಧಾನ/Heuristic Method
- ವೈಜ್ಞಾನಿಕ ವಿಧಾನ/Scientific Method
- ವಿಚಾರ ಸಂಕಿರಣ ವಿಧಾನ/Seminar Method
- ಪ್ರವಾಸ ವಿಧಾನ/Excursion Method
- ಪ್ರದರ್ಶನ ವಿಧಾನ/Exhibition Method
- ತಂಡ ಬೋಧನಾ ವಿಧಾನ/Team Teaching Method
- ಪ್ರಾತ್ಯಕ್ಷಿಕ ವಿಧಾನ/Demonstration Method
- ಕ್ಷೇತ್ರ ಅಧ್ಯಯನ ವಿಧಾನ/Field Study Method
- ಕ್ರಮಾನುಗತ ಬೋಧನಾ ವಿಧಾನ/Programmed Instruction Method
- ಜೀವನ-ಚರಿತ್ರ ವಿಧಾನ/Biographical Method
- ಸಮಸ್ಯೆ ಪರಿಹಾರ ವಿಧಾನ/Problem Solving Method
- ಪರಿಕಲ್ಪನಾತ್ಮಕ ವಿಧಾನ/Conceptual Method
- ಮಾರ್ಗದರ್ಶಿ ಸಂಶೋಧನಾ ವಿಧಾನ/Guided Discovery Method
- ಸಂದರ್ಶನ ವಿಧಾನ/Reference Method
- ನಾಟಿಕರಣ ವಿಧಾನ/Dramatisation Method
- ರಚನೆ ಮತ್ತು ಕಾರ್ಯ ವಿಧಾನ/Structure and Function Method
FULL PROJECT LINK 🔗👇👇👇👇👇

