
🕰️ ಸಮಯ ನಿರ್ವಹಣೆ – ಯಶಸ್ವಿ ಜೀವನದ ಮೂಲಸ್ತಂಭ
ಪರಿಚಯ
ನಾವು ಪ್ರತಿದಿನ “ಸಮಯ ಸಾಕಾಗುತ್ತಿಲ್ಲ” ಅಂತಾ ಹೇಳುತ್ತೇವೆ. ಇದು ನಿಜವಾಗಿಯೂ ನಿಜಾನಾ ಅಂದ್ರೆ ಪ್ರತಿಯೊಬ್ಬರಿಗೂ ಕೂಡ ಪ್ರತಿದಿನ 24 ಗಂಟೆನೇ ಇರೋದು ಅವಾಗ ಪ್ರತಿಯೊಬ್ಬರೂ ಕೂಡ ಯಾಕೆ ಸಕ್ಸಸ್ ಆಗ್ತಾ ಇಲ್ಲ ಅನ್ನೋದು ಒಂದು ಪ್ರಶ್ನೆ ಅಲ್ವಾ. ಆದರೆ ನಿಜವಾಗಿಯೂ ಸಮಯ ಕಡಿಮೆನಾ? 🤔 ಇಲ್ಲ! ಎಲ್ಲರಿಗೂ ಒಂದೇ 24 ಗಂಟೆ ಇದೆ. ಆದರೆ ಕೆಲವರು ಆ 24 ಗಂಟೆಯಲ್ಲಿ ಅಸಾಧ್ಯವೆನಿಸಿದ ಸಾಧನೆ ಮಾಡುತ್ತಾರೆ, ಮತ್ತೊಬ್ಬರು ಆ ಸಮಯವನ್ನೇ ವ್ಯರ್ಥ ಮಾಡುತ್ತಾರೆ. ಈ ವ್ಯತ್ಯಾಸಕ್ಕೆ ಮುಖ್ಯ ಕಾರಣ ಸಮಯದ ನಿರ್ವಹಣೆ ಯಾರು ಸಮಯವನ್ನು ಎಫೆಕ್ಟಿವ್ ಆಗಿ ನಿರ್ವಹಣೆ ಮಾಡುತ್ತಾರೆಯೋ ಅವರು ಸಕ್ಸಸ್ ಆಗ್ತಾರೆ ಯಾರು ಸಮಯಕ್ಕ ಒಂದು ಬೆಲೆ ಅನ್ನೋದು ಕೊಡಲ್ವೋ ಅವರು ಸಕ್ಸಸ್ ಆಗೋದಿಲ್ಲ ಇದರಲ್ಲಿ ಯಾವುದೇ ಎರಡು ಮಾತಿಲ್ಲ
ಸಮಯದ ಮಹತ್ವ
ನಾವು ಹಣ ಸಂಪಾದನೆ ಮಾಡಿದ ನಂತರ ನಾವು ಹಣವನ್ನು ಸಿಂಪಲ್ಲಾಗಿ ನಾವು ಗಳಿಸಬಹುದು ಚಿನ್ನವನ್ನು ನಾವು ಸಂಪಾದನೆ ಮಾಡಬಹುದು ಅಂದ್ರೆ ನಾವು ಏನೇ ಒಂದು ವಸ್ತು ಆಗಿರಬಹುದು ಒಂದು ಮನೆ ಆಗಿರಬಹುದು ಒಂದು ಗಾಡಿಯ ಆಗಿರಬಹುದು ಕಾರು ಪ್ರತಿಯೊಂದು ಕೂಡ ನಾವು ಖರೀದಿಸಬಹುದು ಆದರೆ ಸಮಯ ಅನ್ನೋದು ನಮಗೆ ನಾವು ಖರೀದಿಸುವುದಕ್ಕೆ ಸಾಧ್ಯವಿಲ್ಲ. ಒಂದೇ ಒಂದು ನಿಮಿಷವೂ ಕೂಡ ನಾವು ಖರೀದಿಸುವುದಕ್ಕೆ ಸಾಧ್ಯಾನೆ ಆಗುವುದಿಲ್ಲ. ಎಷ್ಟು ನಿಜ ಅಲ್ವಾ ಸಮಯ ಅನ್ನೋದು ತುಂಬಾ ಪ್ರಾಮುಖ್ಯತೆಯನ್ನು ಹೊಂದಿದೆ ನಾವು ಅದನ್ನು ಒಂದೇ ಸೆಕೆಂಡನ್ನು ಕೂಡ ನಾವು ಹಿಂತಿರುಗಿಸಿಕೊಳ್ಳುವುದಕ್ಕೆ ಸಾಧ್ಯನೇ ಇಲ್ಲ.
ಸಮಯವನ್ನು ಸರಿಯಾಗಿ ಬಳಸುವ ವಿಧಾನಗಳು
- ಗುರಿ ನಿಗದಿ (Goal Setting)
ನಮಗೆ ಮೊದಲು ನಾವು ಏನು ಸಾಧಿಸಬೇಕು ಎಂಬುದು ಸ್ಪಷ್ಟವಾಗಿರಬೇಕು ಅವಾಗ ಮಾತ್ರ ಗುರಿಯನ್ನು ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ. ಗುರಿ ಇಲ್ಲದ ಜೀವನ ಸಮುದ್ರದಲ್ಲಿ ದಿಕ್ಕಿಲ್ಲದ ಹಡಗು ಹೋಲುತ್ತದೆ ಅದೇ ರೀತಿ ಗಾಳಿಪಟಕ್ಕೆ ಯಾವ ರೀತಿಯಲ್ಲಿ ದಾರ ಮುಖ್ಯವೋ ಅದೇ ರೀತಿಯಲ್ಲಿ ಕೂಡ ಒಬ್ಬ ಮನುಷ್ಯನಿಗೆ ಗುರಿ ಅನ್ನೋದು ಅಷ್ಟೇ ಮುಖ್ಯ. ಗುರಿ ಇದ್ದರೆ ನಮ್ಮ ಸಮಯವನ್ನು ಯಾವ ಕೆಲಸಕ್ಕೆ ಹೆಚ್ಚು ಕೊಡಬೇಕು ಎಂಬುದು ತಕ್ಷಣ ಸ್ಪಷ್ಟವಾಗುತ್ತದೆ. ಮೊದಲು ಅದಕ್ಕೆ ಗುರಿಯನ್ನು ಇರಬೇಕು ಗುರಿ ಇದ್ದಾಗ ಮಾತ್ರ ನಾವು ಅದನ್ನು ಹೇಗೆ ಸಾಧ್ಯ ಆಗುತ್ತದೆ ಎಂಬುದನ್ನು ನಮಗೆ ಗೊತ್ತಾಗುತ್ತದೆ.

2.ಟು-ಡೂ ಲಿಸ್ಟ್ ಮಾಡುವುದು
ಪ್ರತಿದಿನ ಬೆಳಗ್ಗೆ ಒಂದು “ಟು-ಡೂ ಲಿಸ್ಟ್” ಮಾಡಿ To-do-list . ಅಂದರೆ ಇವತ್ತು ನಾನು ಯಾವ್ಯಾವ ಕೆಲಸಗಳನ್ನು ಮಾಡಬೇಕು ಎಂದು ಬರೆದುಕೊಳ್ಳಿ. ಇದರಿಂದ ಸಮಯ ವ್ಯರ್ಥವಾಗುವುದಿಲ್ಲ ಮತ್ತು ಕೆಲಸಗಳನ್ನು ಮರೆತು ಬಿಡುವುದಿಲ್ಲ.
ಉದಾಹರಣೆಗೆ ನಾನು ಇವತ್ತು ಒಂದು ಹತ್ತು ಪೇಜ್ ಗಳನ್ನು ಓದಬೇಕು ಒಂದು ದಿನದಲ್ಲಿ ಅಂತ ಗುರಿಯನ್ನು ಇಟ್ಟುಕೊಂಡರೆ ಅದನ್ನು ನಾವು ಒಂದು ಪ್ಲಾನ್ ಅನ್ನು ಬರೆದುಕೊಂಡು ಅದರ ತಕ್ಕಂತೆ ನಾವು ಓದಬೇಕಾಗುತ್ತದೆ.
ಇನ್ನೊಂದು ಉದಾರಣೆ ಅಂದ್ರೆ: ಒಂದು ಗಂಟೆಯಲ್ಲಿ ನಾನು ಒಂದು ಪೇಜ್ ಅನ್ನು ಓದಬೇಕು ಎಂದು ಗುರಿ ಇಟ್ಕೋಬೇಕು ಅದು ಒಂದು ಅಂದ್ರೆ ನಾವು ಒಂದು ದಿನದಲ್ಲಿ ನಾನು ಏನೇನು ಮಾಡಬೇಕಾದಂತ ಕೆಲಸಗಳನ್ನು ಒಂದು ಬೆಳಗ್ಗೆ ನಾವು ಬರೆದುಕೊಂಡಾಗ ಆ ದಿನ ಎಲ್ಲಾ ಕೂಡ ನಮಗೆ ಪ್ರೊಡಕ್ಟಿವ್ ಆಗಿ ಇರುತ್ತದೆ.

3.ಪ್ರಾಮುಖ್ಯತೆ (Priority) ಕಲಿಯುವುದು
ಎಲ್ಲಾ ಕೆಲಸಗಳು ಸಮಾನ ಇಂಪಾರ್ಟೆಂಟ್ ಅಂತ ಏನು ಇರೋದಿಲ್ಲ. ಕೆಲ ಕೆಲಸ ತಕ್ಷಣ ಮಾಡಲೇಬೇಕು, ಕೆಲವು ನಂತರ ಮಾಡಿದರೂ ಸಾಕು. “Important vs. Urgent” ತತ್ವವನ್ನು ಅರಿತುಕೊಂಡರೆ ಸಮಯ ನಿರ್ವಹಣೆ ಸುಲಭವಾಗುತ್ತದೆ. ನೀವು ತುಂಬಾ ಅದ್ಭುತವಾಗಿ ಮತ್ತು ಆಕರ್ಷಣೆಯಾಗಿ ನೀವು ಸಮಯವನ್ನು ನಿರ್ವಹಣೆ ಮಾಡಬೇಕು ಅಂದರೆ ಕೆಲವೊಂದು ನಿಯಮಗಳಿವೆ. ಆ ನಿಯಮಗಳನ್ನು ಪಾಲಿಸುವುದರಿಂದ ನಮಗೆ ತುಂಬಾ ಅದ್ಭುತ ಲಾಭಗಳು ಬರುತ್ತವೆ.
ಉದಾರಣೆಗೆ,: ಯಾವ ಕೆಲಸ ನಮಗೆ ಅರ್ಜೆಂಟಾಗಿರುತ್ತದೆಯೋ ಅದನ್ನು ನಾವು ಫಸ್ಟ್ ಮಾಡಬೇಕು ಯಾವುದು ನಮಗೆ ಅಷ್ಟೊಂದು ಪ್ರಾಮುಖ್ಯತೆ ಅನಿಸೋದಿಲ್ಲವೋ ಅದನ್ನು ನಾವು ಸೆಕೆಂಡು ಮಾಡಬೇಕು ಇದರಿಂದ ನಮಗೆ ಯಾವ ಕೆಲಸ ಮೊದಲು ಮಾಡಬೇಕು ಮತ್ತು ಯಾವ ಕೆಲಸ ನಂತರ ಮಾಡಬೇಕು ಎಂಬುದು ನಮಗೆ ಗೊತ್ತಾಗುತ್ತದೆ.

4.ವಿಳಂಬ (Procrastination) ತಪ್ಪಿಸುವುದು
ಆಮೇಲೆ ಮಾಡ್ತೀನಿ “ಮತ್ತೆ ಮಾಡ್ತೀನಿ”, “ನಾಳೆ ನೋಡ್ತೀನಿ” ಅನ್ನೋ ಅಭ್ಯಾಸ ಜೀವನವನ್ನು ಹಾಳು ಮಾಡುತ್ತದೆ. ದೊಡ್ಡ ಕೆಲಸವಾಗಿದ್ದರೂ ಸಣ್ಣ ಹಂತಗಳಲ್ಲಿ ತಕ್ಷಣ ಪ್ರಾರಂಭಿಸಿ. ಒಬ್ಬ ನಾರ್ಮಲ್ ವ್ಯಕ್ತಿಯಾಗಿರಬಹುದು ಅಥವಾ ಯಾವುದೇ ಒಬ್ಬ ಸಕ್ಸೆಸ್ಫುಲ ಮುಖ್ಯವಾಗಿ ಒಬ್ಬ ಶತ್ರು ಇದಾನೆ ಅಂತ ಅದ್ರೆ. ಅದು ನಾಳೆ ಮಾಡ್ತೀನಿ, ಆಮೇಲೆ ಮಾಡ್ತೀನಿ ಅನ್ನೋ ಒಂದು ಗುಣ. ಯಾರಲ್ಲಿ ಈ ಒಂದು ಅಭ್ಯಾಸ ಇರುತ್ತದೆಯೋ ಆ ವ್ಯಕ್ತಿ ಯಾವತ್ತೂ ಕೂಡ ಸಕ್ಸಸ್ ಆಗುವುದಕ್ಕೆ ಸಾಧ್ಯನೇ ಇಲ್ಲ.
ಉದಾಹರಣೆಗೆ ಒಬ್ಬ ವಿದ್ಯಾರ್ಥಿ ತನ್ನ ಒಂದು ಪುಸ್ತಕದಲ್ಲಿರುವಂತಹ ಒಂದು ನಾಲ್ಕು ಚಾಪ್ಟರ್ಸ್ ಗಳನ್ನು ಅಧ್ಯಯನ ಮಾಡಬೇಕು ಅಂತ ಅಂದ್ರೆ ಇಡೀ ಒಂದು ಆರು ತಿಂಗಳಗಳ ಕಾಲ ಸಮಯ ಬೇಕಾಗುತ್ತದೆ ಆದರೆ ಆ ವಿದ್ಯಾರ್ಥಿ ಪ್ರತಿದಿನ ಕೂಡ ನಾಳೆ ಮಾಡ್ತೀನಿ, ನಾಳೆ ಮಾಡ್ತೀನಿ, ನಾಳೆ ಮಾಡ್ತೀನಿ ಎಂದು ಇಡೀ ಕಾಲವನ್ನು ಕಳೆದು ಒಂದೇ ದಿನದಲ್ಲಿ ಆ ಒಂದು ಪಠ್ಯಪಸ್ತಕ ನಾಳೆ ಎಕ್ಸಾಮ್ ಇದೆ ಅಂತ ಅಂದಾಗ ಇವತ್ತು ಓದುತ್ತಾನೆ. ಇದೆಲ್ಲವೂ ಕೂಡ ಒಬ್ಬ ಅನ್ ಸಕ್ಸೆಸ್ಫುಲ್ ವ್ಯಕ್ತಿಗೆ ಇರಬೇಕಾದಂತಹ ಒಂದು ಲಕ್ಷಣ. ಆದ್ದರಿಂದ ನಿಮಗೆ ನೀವು ಸಕ್ಸಸ್ ಆಗಬೇಕು ಅಂತ ಅಂದ್ರೆ ಮೊದಲು ನಾಳೆ ಮಾಡ್ತೀನಿ ಅನ್ನೋ ಒಂದು ಅಭ್ಯಾಸವನ್ನು ತೆಗೆದುಹಾಕಿ.
ಅದಕ್ಕೆ ದೊಡ್ಡವರು ಹೇಳಿದ್ದಾರೆ ನಾಳೆ ಮಾಡುವಂತಹ ಕೆಲಸವನ್ನು ಇವತ್ತೇ ಮಾಡಿ ಇವತ್ತು ಮಾಡುವಂತ ಕೆಲಸವನ್ನು ಹೀಗೆ ಮಾಡಿ ಅಂತ.

5.ಮೊಬೈಲ್ ಮತ್ತು ಸೋಶಿಯಲ್ ಮೀಡಿಯಾ ನಿಯಂತ್ರಣ
ಇಂದಿನ ಕಾಲದಲ್ಲಿ ಏನೋ ಒಂದು ಸಮಸ್ಯೆ ಇರ್ತಾ ಇತ್ತು ಯಾವುದೇ ಒಂದು ಕೆಲಸವನ್ನು ಮಾಡಬೇಕು ಅಂತ ಅಂದು ಅದಕ್ಕೆ ಒಂದು ತನ್ನದೇ ಆದಂತಹ ಒಂದು ಸಮಸ್ಯೆಗಳು ಬರ್ತಾ ಇದ್ವು. ಆದರೆ ಈ ಒಂದು ಅಂತರ್ಜಾಲ ಯುಗದಲ್ಲಿ ನಾವೆಲ್ಲರೂ ಕೂಡ ಮೊಬೈಲ್ ಮತ್ತು ಸೋಶಿಯಲ್ ಮೀಡಿಯಕ್ಕೆ ಅಡಿಕ್ಟ್ ಆಗಿಬಿಟ್ಟಿದ್ದೀವಿ. ಮುಂಜಾನೆ ಎದ್ದ ತಕ್ಷಣದಿಂದ ಹಿಡಿದು ರಾತ್ರಿ ಮಲಗುವ ತನಕ ಕೂಡ ಮೊಬೈಲನ್ನು ಯೂಸ್ ಮಾಡ್ತಾ ಇರ್ತೀವಿ.
ಇದು ತುಂಬಾ ಅಪಾಯಕಾರಿ ಆದಂತಹ ಒಂದು ಪರಿಣಾಮವನ್ನು ಬೀರುತ್ತದೆ. ಕೇವಲ ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಪ್ರತಿಯೊಬ್ಬರ ಮೇಲೆ ಕೂಡ ಇದು ಪರಿಣಾಮ ಬೀರುತ್ತಿದೆ.
ಒಬ್ಬ ನಾರ್ಮಲ್ ಆಗಿ ಒಬ್ಬ ವ್ಯಕ್ತಿ ಸುಮಾರು ಒಂದು ದಿನಕ್ಕೆ ಸುಮಾರು 6 ರಿಂದ 8 ಗಂಟೆಗಳ ಕಾಲ ಸಮಯವನ್ನು ವ್ಯರ್ಥ ಮಾಡ್ತಾ ಇದ್ದಾನೆ ಒಂದು ಮೊಬೈಲ್ ನಲ್ಲಿ.
ಆದರಿಂದ ನಿಮಗೆ ಎಷ್ಟು ಸಾಧ್ಯನೋ ಅಷ್ಟು ಬೇಗ ಈ ಮೊಬೈಲ್ ಅಡಿಕ್ಟ್ ಇಂದ ದೂರ ಇರುವುದಕ್ಕೆ ಟ್ರೈ ಮಾಡಿ.

ವಿದ್ಯಾರ್ಥಿಗಳಿಗೆ ಸಮಯ ನಿರ್ವಹಣೆ ಸಲಹೆಗಳು
- ಬೆಳಗ್ಗೆ 4–7 ಗಂಟೆ: ಅತ್ಯುತ್ತಮ ಅಧ್ಯಯನ ಸಮಯ
- ಪ್ರತಿದಿನ ಕನಿಷ್ಠ 2–3 ಗಂಟೆ ಸ್ವಯಂ ಓದು
- ಟೈಮ್ ಟೇಬಲ್ ಮಾಡಿ,
- ಪ್ರತಿಯೊಂದು ವಿಷಯಕ್ಕೆ ಸಮಯ ವಿಂಗಡಿಸಿ
- ವಾರಕ್ಕೆ ಒಂದು ದಿನ ಪುನರಾವರ್ತನೆಗೆ (Revision) ಮೀಸಲು ಮಾಡಿ
- ಸ್ವಲ್ಪ ದಿನದಲ್ಲಿ ಪರೀಕ್ಷೆ ಇದೆ ಅಂದಾಗ.ಪರೀಕ್ಷೆಗೆ ಮುಂಚೆ ಹೊಸ ವಿಷಯಕ್ಕಿಂತ, ಓದಿರುವದನ್ನು ಮರು ಓದುವುದಕ್ಕೆ ಹೆಚ್ಚು ಸಮಯ ಕೊಡಿ
Full project link
SubscribeFOLLOW OUR CHANNELS

