
Trending Viral Vayyari Song Video Editing Reel 19
ಸೈದ್ಧಾಂತಿಕ ಜ್ಞಾನ
ಸಂವಿಧಾನಿಕ ಜ್ಞಾನ ಎಂಬ ಪದವು ವ್ಯಕ್ತಿಯು ಹೊಂದಿರುವ ಜ್ಞಾನ ಮತ್ತು ಕೌಶಲ್ಯದ ಸಾಮರ್ಥ್ಯವನ್ನು ಬಿಂಬಿಸುವ ಯಾವುದಾದರೂ ಅಂಶ ಆಗಿರಬಹುದು ಅಥವಾ ಘಟನೆ ಆಗಿರಬಹುದು ಸನ್ನಿವೇಶ ಆಗಿರಬಹುದು ಅಥವಾ ಸಂದರ್ಭಕ್ಕೆ ಅನುಗುಣವಾಗಿ ವ್ಯಕ್ತಿಯಾಗಿರಬಹುದು ವಸ್ತುವಿನ ಬಗೆಗೆ ಅಧ್ಯಯನದ ಮೂಲಕ ತಿಳಿದುಕೊಂಡ ಜ್ಞಾನವೇ ಸೈದಾಂತಿಕ ಜ್ಞಾನವಾಗಿದೆ ಇಲ್ಲಿ ಮುಖ್ಯವಾಗಿ ನಾವು ಗಮನಿಸಬೇಕಾಗಿದ್ದು ಏನು ಅಂದರೆ ಒಂದು ಘಟನೆಯ ಮೂಲಕ ನಾವು ಜ್ಞಾನವನ್ನು ಪಡೆದುಕೊಳ್ಳುವುದು ಆಗಿರಬಹುದು ಕೆಲವೊಂದು ಸನ್ನಿವೇಶಗಳು ನಡಿತಾ ಇರುತ್ತೆ ಆ ಸನ್ನಿವೇಶಗಳಿಂದ ನಾವು ಜ್ಞಾನವನ್ನು ಪಡೆದುಕೊಳ್ಳುತ್ತೇವೆ. ಕೆಲವೊಂದು ಸಂದರ್ಭಕ್ಕೆ ಅನುಗುಣವಾಗಿ ಕೆಲವೊಂದು ಜ್ಞಾನವನ್ನು ಸಿಗುತ್ತೆ. ಇನ್ನು ಕೆಲವರು ಒಳ್ಳೆಯ ಗುಣಲಕ್ಷಣಗಳನ್ನು ಹೊಂದಿರುವಂತಹ ವ್ಯಕ್ತಿ ನಮಗೆ ಒಳ್ಳೆಯದನ್ನು ಮಾಡಿದಾಗ ನಾವು ಆ ವ್ಯಕ್ತಿಯನ್ನು ಮರೆಯೋದಕ್ಕೆ ಸಾಧ್ಯವಿಲ್ಲ ಮತ್ತೆ ಯಾರು ನಮ್ಮನ್ನು ಕೆಟ್ಟದಾಗಿ ನೋಡ್ತಾರೋ ಅಥವಾ ನಮಗೆ ಒಂದು ಕೆಟ್ಟದ್ದನ್ನು ಮಾಡಿರುತ್ತಾರೆ ಅಂತಹ ವ್ಯಕ್ತಿಗಳನ್ನು ಕೂಡ ನಾವು ಮರೆಯುವುದಕ್ಕೆ ಸಾಧ್ಯ ಆಗುವುದಿಲ್ಲ ಯಾವುದೇ ವ್ಯಕ್ತಿಯಿಂದ ಕೂಡ ನಾವು ಜ್ಞಾನವನ್ನು ಸಂಪಾದನೆ ಮಾಡಬಹುದು. ಅದು ಕೇವಲ ಪುಸ್ತಕಗಳಿಂದ ನಾವು ಜ್ಞಾನವನ್ನು ಪಡೆದುಕೊಳ್ಳಬಹುದು ಗ್ರಂಥಗಳ ಮೂಲಕ ನಾವು ಜ್ಞಾನವನ್ನು ಪಡೆದುಕೊಳ್ಳಬಹುದು ಸಮೂಹ ಮಾಧ್ಯಮಗಳಿಂದ ಜಾಲತಾಣಗಳಿಂದ ನಾವು ಜ್ಞಾನ ಪಡೆದುಕೊಳ್ಳಬಹುದು ನಿಘಂಟು ಓದುವುದರ ಮುಖಾಂತರ ವಿಶ್ವಕೋಶವನ್ನು ಓದುವುದರ ಮುಖಾಂತರ ಮುಂತಾದವುಗಳಿಂದ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದರೆ ಒಂದೇ ದಾರಿ ಇಲ್ಲ ಅದಕ್ಕೆ ನೂರಾರು ದಾರಿಗಳಿದ್ದಾವೆ ಎಂದು ನಮಗೆ ಇಲ್ಲಿ ಸತ್ಯ ಅಸತ್ಯ ಯಾವುದು ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ.
ಈಗ ನಾವು ನೋಡಿದರೆ ಸೈದ್ಧಾಂತಿಕ ಜ್ಞಾನವು ಇದು ಏಕೆ ಸತ್ಯ ಹಾಗೂ ಸತ್ಯವನ್ನು ಸತ್ಯವೆಂದು ತೋರಿಸಲು ಬಳಸುವ ಜ್ಞಾನವೇ ಇದು ಸೈದ್ಧಾಂತಿಕ ಜ್ಞಾನವಾಗಿದೆ.
ನಿಮಗೆ ಗೊತ್ತಿರಬೇಕು ಎಲ್ಲಾ ಸೈದಾಂತಿಕ ಜ್ಞಾನವು ಏನು ಏಕೆ ಯಾವಾಗ ಎಷ್ಟು ಹೇಗೆ ಎಂಬ ಅಂಶಗಳು ಒಳಗೊಂಡಿರುತ್ತವೆ. ಈ ಅಂಶಗಳಿಗೆ ನೇರವಾಗಿ ಉತ್ತರಿಸುವುದು ನಮ್ಮ ಸೈದಾಂತಿಕ ಜ್ಞಾನವಾಗಿದೆ ಏನು ಹೇಗೆ ಎತ್ತ ಎಂದು ಕೆಲವೊಂದು ಪ್ರಶ್ನೆಗಳು ಆ ಪ್ರಶ್ನೆಗಳಿಗೆ ಉತ್ತರವನ್ನು ನೀಡಬೇಕು ಎಂದರೆ ಈ ಸೈದಾಂತಿಕ ಜ್ಞಾನ ಎಂಬುದು ತುಂಬಾ ಅವಶ್ಯಕತೆ ಇದೆ. ಸೈದಾಂತಿಕ ಜ್ಞಾನದಲ್ಲಿ ಆ ವಸ್ತು ವಿಷಯದ ಪೂರ್ಣ ಕಲ್ಪನೆಯನ್ನು ಮೂಡಿಸುವುದಾಗಿದೆ.
ಉದಾಹರಣೆಗೆ ಪ್ರತಿಯೊಂದು ವಸ್ತು ಕೂಡ ದಹಿಸಲು ಗಾಳಿಯು ಅವಶ್ಯಕತೆ ಎಂಬುದನ್ನು ಕಾರಣ ಮತ್ತು ಪರಿಣಾಮಗಳಿಂದ ಅರ್ಥೈಸುವುದು ಸದಾಂತಿಕ ಜ್ಞಾನವಾಗಿದೆ ಇಲ್ಲಿ ನಾವು ಗಮನಿಸಬೇಕಾಗಿದ್ದು ಎಲ್ಲಾ ಪಕ್ಷ ಪ್ರಾಣಿಗಳಿಗೆ ನಾವು ಉಸಿರಾಡಬೇಕಾಗಿರುತ್ತದೆ ಆ ಉಸಿರಾಟ ಏಕೆ ಆಗುತ್ತೆ? ಹೇಗೆ ನಾವು ಉಸಿರಾಡಬೇಕು ನಾವು ಉಸಿರನ್ನು ತೆಗೆದುಕೊಳ್ಳುವುದು ನಿಲ್ಲಿಸಿದರೆ ನಮ್ಮ ಪ್ರಾಣ ಏಕೆ ಹೋಗುತ್ತದೆ ಎಂಬ ಕೆಲವೊಂದು ಪ್ರಶ್ನೆಗಳಿಗೆ ಈ ಸೈದಾಂತಿಕ ಜ್ಞಾನವೇ ನಮಗೆ ಉತ್ತರಿಸುತ್ತದೆ.
ಸೈದಾಂತಿಕ ಜ್ಞಾನವು ಸತ್ಯ ಘಟನೆಗಳ ಆಧಾರವಾಗಿರುತ್ತದೆ ಇದು ಕೇವಲ ಒಂದು ಹೇಗೆ ಎಂಬುದರ ಮೂಲಕ ಅಷ್ಟೇ ಅಲ್ಲ ಸತ್ಯ ಯಾವುದು ಎಂಬುದನ್ನು ಕೂಡ ಇದು ನಮಗೆ ತಿಳಿಸಿಕೊಡುತ್ತದೆ. ಇಲ್ಲಿ ಎಲ್ಲವನ್ನೂ ವಿವರಿಸಿ ಬೇಕೆಂಬ ನಿಯಮವಲ್ಲ ಏನು ಇಲ್ಲ ಆದರೆ ಘಟಕಾಂಶಗಳು ತಿಳಿಸಿದರೆ ಸಾಕಾಗುತ್ತದೆ ಅಷ್ಟೇ.
ಶೈಕ್ಷಣಿಕ ಕ್ಷೇತ್ರವು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಮೂಲಭೂತ ಅಂಶವೇ ಈ ಸೈದಾಂತಿಕ ಜ್ಞಾನವಾಗಿದೆ ಮಕ್ಕಳ ವಯೋಮಾನ ಬುದ್ದಿಮಟ್ಟಕ್ಕೆ ತಕ್ಕಂತೆ ಹಲವು ವೈವಿಧ್ಯಮಯ ವಿಚಾರಗಳನ್ನು ತರಗತಿಯ ಸನ್ನಿವೇಶದಲ್ಲಿ ತಿಳಿಸಲಾಗುತ್ತದೆ ಕೇವಲ ಶಾಲೆಯ ಹೊರಗಡೆ ಅಷ್ಟೇ ಅಲ್ಲ ಇತ್ತೀಚಿನ ದಿನಗಳಲ್ಲಿ ಶಾಲೆಯ ಒಳಗಡೆ ನಮ್ಮ ಬುದ್ಧಿ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಕೂಡ ನಮ್ಮ ಶಾಲೆಯಲ್ಲಿ ನಮ್ಮ ತರಗತಿಯಲ್ಲಿ ಪ್ರತಿದಿನ ಕೂಡ ಅಭಿವೃದ್ಧಿ ಹೊಂದುತ್ತಾ ಬರ್ತಾ ಇದೆ. ಧ್ಯಾನ ಆ ಮೂಲಕ ಅವರಲ್ಲಿ ಜ್ಞಾನ ತಿಳುವಳಿಕೆ ಅನ್ವಯ ಸಂಶ್ಲೇಷಣೆ ವಿಶ್ಲೇಷಣೆ ಮೌಲ್ಯಮಾಪನ ಸಾಮರ್ಥ್ಯವನ್ನು ಬೆಳೆಸುವುದು.
ಒಟ್ಟಿನಲ್ಲಿ ನಾವು ಹೇಳಬೇಕು ಎಂದರೆ ಸೈದಾಂತಿಕ ಜ್ಞಾನವು ಅಧ್ಯಯನದ ಮೂಲಕ ಮತ್ತು ಸಂಶೋಧನೆ ಮೂಲಕ ಮತ್ತು ಕೆಳಗೊಂದು ವಿಷಯಗಳನ್ನು ವೀಕ್ಷಿಸುವುದು ಮೂಲಕ ಅಥವಾ ನಾವೇ ಸ್ವತಹ ಅನುಭವದ ಮೂಲಕ ಮತ್ತು ಪ್ರಾಯೋಗಿಕವಾಗಿ ಯು ಕೂಡ ಈ ಸೈದಾಂತಿಕ ಜ್ಞಾನವನ್ನು ಪಡೆದುಕೊಳ್ಳಬಹುದು.
ಸೈದಾಂತಿಕ ಜ್ಞಾನದ ಲಕ್ಷಣಗಳು
- ಸೈದಾಂತಿಕ ಜ್ಞಾನವು ಸಿದ್ಧಾಂತಗಳ ಮೇಲೆ ಆಧಾರಿತವಾಗಿರುತ್ತದೆ. ಇದು ಮುಖ್ಯವಾಗಿ ಒಂದು ಸಿದ್ಧಾಂತಗಳು ಒಂದು ವಿಷಯ ಇದೆ ಅಂತಂದ್ರೆ ಆ ವಿಷಯಕ್ಕೆ ಸಂಬಂಧಪಟ್ಟಂತಹ ಕೆಲವೊಂದು ಸಿದ್ಧಾಂತಗಳನ್ನು ಅನುಸರಿಸಬೇಕಾಗುತ್ತದೆ ಕೇವಲ ನಾವು ಮಾತನಾಡುವುದರ ಮುಖಾಂತರ ನೋಡುವುದರ ಮುಖಾಂತರ ಅಷ್ಟೇ ಅಲ್ಲ ಇದಕ್ಕೆ ಆದಂತಹ ಕೆಲವೊಂದು ಸಿದ್ಧಾಂತಗಳಿದವೇ ಆ ಸಿದ್ಧಾಂತಗಳ ಮೂಲಕ ಇದು ಸಿದ್ಧಾಂತಗಳ ಆಧಾರಿತವಾಗಿರುತ್ತದೆ.
- ಸೈದಾಂತಿಕ ಜ್ಞಾನವನ್ನು ಅಧ್ಯಯನ ಸಂಶೋಧನೆಗಳಿಂದ ಪಡೆಯಬಹುದು. ಇದನ್ನು ನಾವು ಸೈದಾಂತಿಕ ಜ್ಞಾನವನ್ನು ಕೇವಲ ಅಧ್ಯಯನದಗಳ ಮೂಲಕ ಆಗಿರಬಹುದು ಮತ್ತು ಅದನ್ನು ಸಂಶೋಧನೆಗಳನ್ನು ಮಾಡುವುದರ ಮುಖಾಂತರ ನಾವು ಈ ಒಂದು ಜ್ಞಾನವನ್ನು ಪಡೆದುಕೊಳ್ಳಬಹುದಾಗಿದೆ.
- ಇದು ಒಂದು ಘಟನೆ ಎಲ್ಲಾ ಘಟಕಾಂಶಗಳನ್ನು ಒಳಗೊಂಡಿರುತ್ತದೆ. ಒಂದು ವಿಷಯ ಇದೆ ಅಂತ ಅಂದ್ರೆ ಆ ವಿಷಯಕ್ಕೆ ಸಂಬಂಧಪಟ್ಟರುವಂತಹ ಎಲ್ಲಾ ಘಟಕಗಳ ಕೂಡ ಒಳಗೊಂಡಿರುತ್ತದೆ.
- ಸೈದ್ಧಾಂತಿಕ ಜ್ಞಾನದಲ್ಲಿ ಒಂದು ಪರಿಕಲ್ಪನೆಗೆ ಸಂಬಂಧಿಸಿದಂತೆ ವಿವೇಕ ಆಯಾಮಗಳನ್ನು ಹೊಂದಿರುವುದು.
- ಸೈದಾಂತಿಕ ಜ್ಞಾನದ ವ್ಯಾಪ್ತಿಯು ವಿಶಾಲವಾಗಿರುತ್ತದೆ. ಈ ಜ್ಞಾನವೂ ಕೇವಲ ಒಂದು ನಿರ್ದಿಷ್ಟವಾಗಿರುವುದಿಲ್ಲ ಇದು ತುಂಬಾ ವ್ಯಾಪ್ತಿಯನ್ನು ಹೊಂದಿರುತ್ತದೆ ಇದು ತುಂಬಾ ವಿಶಾಲವಾಗಿರುತ್ತದೆ ಇದಕ್ಕೆ ಕೊನೆ ಎಂಬುದೇ ಇರುವುದಿಲ್ಲ.
ಪ್ರಯೋಗಿಕ ಜ್ಞಾನ:
ಪ್ರಯೋಗಿಕ ಜ್ಞಾನ ಎಂಬುದು ಕೆಲವೊಂದು ಅಂಶಗಳಲ್ಲಿ ಅತ್ಯಂತ ಪರಿಣಾಮಕಾರಿ ಜ್ಞಾನವೇ ಪ್ರಯೋಗಿಕ ಜ್ಞಾನ ಎಂದು ಕರೆಯಬಹುದು ಇದರ ಅರ್ಥ ಪ್ರಯೋಗಿಕತೆಯು ಸ್ವಯಂ ಚಾಲನೆ ಕಾರಣಗಳು ಉದ್ದೇಶಗಳು ಸಂದರ್ಬಿಕ ಕ್ರಿಯೆಗಳನ್ನು ಇದು ಒಳಗೊಂಡಿರುತ್ತದೆ. ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾಗಿದ್ದು ಪ್ರಯೋಗಿಕ ಜ್ಞಾನವೆಂದರೆ ಒಂದು ನಿರ್ದಿಷ್ಟವಾಗಿ ಕೌಶಲ್ಯವನ್ನು ಹೇಗೆ ನಿರ್ವಹಿಸಬಹುದೆಂಬುದೇ ಆಗಿದೆ. ಇದು ವಿಶಾಲವಾಗಿ ಇರುವುದಿಲ್ಲ ವಿಜ್ಞಾನ ಇದು ಕೇವಲ ಒಂದು ನಿರ್ದಿಷ್ಟ ಒಂದು ವಿಷ ಇದೆ ಅಂತ ಅಂದ್ರೆ ಆ ವಿಷಯಕ್ಕೆ ಮಾತ್ರ ಸಂಬಂಧಪಟ್ಟಿರುತ್ತದೆ. ಜ್ಞಾನವನ್ನು ಅನ್ವಯಿಸುವ ಪ್ರಕ್ರಿಯೆ ಪ್ರಯೋಗಿಕತೆಯಾಗಿದೆ.
ಇಲ್ಲಿ ಒಂದು ಕೌಶಲ್ಯವನ್ನು ನಿರ್ವಹಿಸಲು ತಮ್ಮ ಜ್ಞಾನವನ್ನು ಅನ್ವಯಿಸುವದೇ ಪ್ರಯೋಗಿಕ ಜ್ಞಾನವಾಗಿದೆ ಆದರೆ ಪ್ರಯೋಗಿಕ ಜ್ಞಾನವನ್ನು ಪಡೆಯಲು ಜ್ಞಾನದ ಇತರೆ ಆಯಾಮಗಳ ಬೆಂಬಲ ಅನ್ನೋದು ಇದೆ ನಾವು ಒಂದೇ ಸಾರಿ ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಆದರೆ ಆ ಪ್ರಯೋಗಿಕ ಜ್ಞಾನವನ್ನು ಪಡೆಯಲು ಕೆಲವೊಂದು ಆಯಾಮಗಳು ಇದೆ ಆ ಆಯಾಮಗಳನ್ನು ಅನುಸರಿಸಿದರೆ ಆಯಾಮಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೆ ಆದಲ್ಲಿ ಆ ಪ್ರಾಯೋಗಿಕ ಜ್ಞಾನವನ್ನು ನಾವು ಪಡೆಯಬಹುದು.
ಒಂದು ನಿರ್ದಿಷ್ಟ ಪ್ರಾಯೋಗಿಕ ಜ್ಞಾನವನ್ನು ಪಡೆಯಲು ಇತರ ಜ್ಞಾನದ ಆಯಾಮಗಳಾದ
- ಸೈದಾಂತಿಕ ಜ್ಞಾನ.
- ವೀಕ್ಷಣೆ ಜ್ಞಾನ
- ಸಲಹೆ
- ಅಭ್ಯಾಸ
- ಅನುಭವ
ಹೀಗೆ ಈ ಆಯಾಮಗಳ ಆಧಾರಿತವಾಗಿ ನಾವು ಪ್ರಯೋಗಿಕ ಜ್ಞಾನವನ್ನು ಪಡೆಯಬಹುದಾಗಿದೆ
ಅದೇ ರೀತಿ ನಮ್ಮ ಶಿಕ್ಷಣದಲ್ಲಿ ಕೂಡ ಈ ಪ್ರಯೋಗಿಕ ಜ್ಞಾನವು ಅತಿ ಅವಶ್ಯಕತೆ ಎಂದು ಹೇಳಬಹುದು ಶಿಕ್ಷಕನದ ಮುಖ್ಯ ಗುರಿ ವಿದ್ಯಾರ್ಥಿಗಳಿಗೆ ಸೈದಾಂತಿಕ ಜ್ಞಾನವನ್ನು ಮತ್ತು ಕೌಶಲ್ಯಗಳ ನು ತಿಳಿಸುವ ಮೂಲಕ ಅವರಲ್ಲಿ ಆ ಜ್ಞಾನವನ್ನು ಮತ್ತು ಕೌಶಲ್ಯಗಳನ್ನು ತಮ್ಮ ನಿತ್ಯ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಮತ್ತು ಹೇಗೆ ತಮ್ಮ ಜೀವನದಲ್ಲಿ ಬಳಸುವ ಮೂಲಕ ಪ್ರಯೋಗಿಕ ಜ್ಞಾನವನ್ನು ಹೇಗೆ ಬೆಳೆಸಬೇಕು ಎಂಬುದು ಶಿಕ್ಷಕರು ಹೇಳಿಕೊಳ್ಳುತ್ತಾರೆ ಒಟ್ಟಿನಲ್ಲಿ ಪ್ರಯೋಗಿಕ ಜ್ಞಾನವು ಸೈದ್ಧಾಂತಿಕ ಜ್ಞಾನವಾಗಿರುತ್ತದೆ ಮತ್ತು ವಾಸ್ತವಿಕ ಜ್ಞಾನ ಅನುಭವಾಗಿರುತ್ತದೆ.
Full Project Link 🔗👇👇👇👇

